ADVERTISEMENT

ಶುಕ್ರವಾರ, 4–2–1994

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 19:45 IST
Last Updated 3 ಫೆಬ್ರುವರಿ 2019, 19:45 IST
   

ಪಾಕ್ ಕೃತ್ಯಕ್ಕೆ ಮಣಿಯದ ಭಾರತ

ಜಿನೀವಾ, ಫೆ. 3 (ಪಿಟಿಐ, ಯುಎನ್‌ಐ)– ಪಾಕಿಸ್ತಾನದ ಕುಮ್ಮಕ್ಕಿನಿಂದ ಭಯೋತ್ಪಾದನೆ ನಡೆಸುತ್ತಿರುವ ದುಷ್ಟ ಹಾಗೂ ವಿಚ್ಛಿದ್ರಕಾರಿ ಶಕ್ತಿಗಳಿಗೆ ತಾನು ಎಂದಿಗೂ ಮಣಿಯುವುದಿಲ್ಲ ಎಂದು ಭಾರತ ಇಂದು ಘೋಷಿಸಿತು. ಭಯೋತ್ಪಾದನೆ ಪಿಡುಗಿನ ವಿರುದ್ಧದ ತನ್ನ ಹೋರಾಟಕ್ಕೆ ಅದು ಅಂತರ್‌ರಾಷ್ಟ್ರೀಯ ಸಮುದಾಯದ ಬೆಂಬಲ ಯಾಚಿಸಿತು.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗದ ಐವತ್ತನೆಯ ಸಮಾವೇಶದಲ್ಲಿ ಮಾತನಾಡಿದ ಹಣಕಾಸು ಸಚಿವ ಡಾ. ಮನಮೋಹನ್ ಸಿಂಗ್ ಅವರು, ಬಾಹ್ಯ ಶಕ್ತಿಗಳ ಬೆಂಬಲ ಮತ್ತು ಸಹಾಯದಿಂದ ನಡೆಯುತ್ತಿರುವ ಭಯೋತ್ಪಾದನೆ ಭಾರತದ ಭೌಗೋಳಿಕ ಸಮಗ್ರತೆಗೆ ಸವಾಲು ಒಡ್ಡಿದ್ದು, ರಾಷ್ಟ್ರ ನಿರ್ಮಾಣದ ಮೂಲಭೂತ ಕಾರ್ಯದಿಂದ ವಿಮುಖಗೊಳಿಸುವ ಉದ್ದೇಶ ಹೊಂದಿದೆ ಎಂದು ಆಪಾದಿಸಿದರು.

ADVERTISEMENT

ಕುವೈತಿಗೆ ವಿಮಾನ

ನವದೆಹಲಿ, ಫೆ. 3 (ಯುಎನ್‌ಐ)– ಇಂಡಿಯನ್ ಏರ್‌ಲೈನ್ಸ್ ಕುವೈತಿಗೆ ವಿಮಾನ ಸಂಚಾರ ಆರಂಭಿಸಿದೆ. ಕಳೆದ ರಾತ್ರಿ ಕುವೈತಿನಲ್ಲಿ ಇಳಿದ ಇಂಡಿಯನ್ ಏರ್‌ಲೈನ್ಸ್‌ನ ಪ್ರಪ್ರಥಮ ವಿಮಾನವನ್ನು ಕುವೈತ್ ಪ್ರವಾಸದಲ್ಲಿರುವ ಭಾರತದ ನಾಗರಿಕ ಯಾನ ಸಚಿವ ಗುಲಾಂ ನಬಿ ಆಜಾದ್ ಬರಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.