ADVERTISEMENT

ಸೋಮವಾರ, 15-4-1963

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:59 IST
Last Updated 14 ಏಪ್ರಿಲ್ 2013, 19:59 IST

ಸಾಂಕೃತ್ಯಾಯನ ಅವರ ನಿಧನ
ಡಾರ್ಜಿಲಿಂಗ್, ಏ. 14- ಪ್ರಸಿದ್ಧ ಭಾಷಾ ನಿಪುಣರೂ, ಪಂಡಿತರೂ, ಇತಿಹಾಸ ಕಾರರೂ ಆಗಿದ್ದ ಪಂಡಿತ ರಾಹುಲ ಸಾಂಕೃತ್ಯಾಯನ ಅವರು ಇಂದು ಮಧ್ಯಾಹ್ನಕ್ಕೆ ಸ್ವಲ್ಪ ಮುಂಚೆ ಇಲ್ಲಿನ ಈಡನ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ಮೃತರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮದ್ರಾಸ್ ರೇವಿನಿಂದ 908 ಚೀಣೀಯರ ನಿರ್ಗಮನ
ಮದ್ರಾಸ್, ಏ. 14- ಭಾರತದಲ್ಲಿದ್ದ ಚೀಣೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲು ಚೀಣಾ ಸರ್ಕಾರ ಕಳುಹಿಸಿದ್ದ ಎರಡು ನೌಕೆಗಳು 908 ಮಂದಿ ಚೀಣೀಯರನ್ನು ಹೊತ್ತು ಇಂದು ಬೆಳಿಗ್ಗೆ ಮದರಾಸ್ ಬಂದರಿನಿಂದ ಪ್ರಯಾಣ ಮಾಡಿದವು. ಪಿ.ಟಿ.ಐ.

ಐದನೇ ಯೋಜನೆ ಅಂತ್ಯದ ವೇಳೆಗೆ ದಾರಿದ್ರ್ಯ, ನಿವಾರಣೆ
ನವದೆಹಲಿ, ಏ. 14- ಐದನೆಯ ಪಂಚವಾರ್ಷಿಕ ಯೋಜನೆಯ ಅಂತ್ಯದ ವೇಳೆಗೆ ಸಮಾಜದ ದುರ್ಬಲ ವರ್ಗ ದವರನ್ನು ದಾರಿದ್ರ್ಯ ಹಾಗೂ ನಿರು ದ್ಯೋಗದಿಂದ ಪಾರುಮಾಡುವ ಗುರಿ ಸಾಧನೆ ಬಗ್ಗೆ ಆಯೋಜನಾ ಮಂಡಲಿ ಯು ಆಶಾಭಾವನೆಯಿಂದಿರುವುದಾಗಿ ಮಂಡಲಿಯ ಸದಸ್ಯ ಶ್ರೀ ಶ್ರೀಮನ್ನಾರಾಯಣ್ ಅವರು ಇಂದು ಇಲ್ಲಿ ತಿಳಿಸಿದರು.

ಈ ಕಾರ್ಯ ಬಹು ಕಷ್ಟಸಾಧ್ಯವಾದುದೆಂದೂ ಸರ್ಕಾರ ಮತ್ತು ಸ್ವಯಂಸೇವಕ ಸಂಸ್ಥೆಗಳು ಈ ಬಗ್ಗೆ ಸತತವಾಗಿ ಶ್ರಮಿಸಬೇಕಾದುದು ಅಗತ್ಯವೆಂದೂ ಅವರು ಸರ್ವೋದಯ ಸಮ್ಮೇಳನದಲ್ಲಿ ಮಾತನಾಡುತ್ತ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.