ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 23–1–1995

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 20:15 IST
Last Updated 22 ಜನವರಿ 2020, 20:15 IST

ಅಂಜುಮನ್ ಹಿಂಜರಿದರೆ...?
ಬಳ್ಳಾರಿ, ಜ. 22– ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಜ. 26ರಂದು ರಾಷ್ಟ್ರಧ್ವಜಾರೋಹಣ ಮಾಡಲು ಅಂಜುಮನ್ ಸಂಸ್ಥೆ ಕೊನೇ ಕ್ಷಣದಲ್ಲಿ ಹಿಂಜರಿದರೆ ಆಗ ಉದ್ಭವಿಸಬಹುದಾದ ‘ಯಾವುದೇ ರೀತಿ ಪರಿಸ್ಥಿತಿ ಎದುರಿಸಲು ರಾಜ್ಯ ಸರ್ಕಾರ ಸಿದ್ಧವಾಗಿದೆ’ ಎಂದು ಮುಖ್ಯಮಂತ್ರಿ ದೇವೇಗೌಡ ಇಂದಿಲ್ಲಿ ತಿಳಿಸಿದರು.

ಇಂದು ಆಲಮಟ್ಟಿ ಜಲಾಶಯ ಪ್ರದೇಶಕ್ಕೆ ತೆರಳುವ ಮಾರ್ಗದಲ್ಲಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಪ್ರಧಾನಿ ವಿರುದ್ಧ ಅರ್ಜುನ್ ಮತ್ತೆ ಪ್ರಹಾರ
ಬಂಡಾ, ಜ. 22 (ಪಿಟಿಐ)– ಕಾಂಗ್ರೆಸ್ (ಐ) ನಾಯಕತ್ವದ ವಿರುದ್ಧ ಸಿಡಿದೆದ್ದ ಅರ್ಜುನ್ ಸಿಂಗ್ ಅವರು ಇಂದು ಮತ್ತೆ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಾರೆ. ಇದೇ ವೇಳೆ ಕಾಂಗೈ ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ಪೈಲಟ್ ಅವರು ಪಕ್ಷದಲ್ಲಿ ಒಗ್ಗಟ್ಟು ಮೂಡಿಸುವ ಆಶಾವಾದ ವ್ಯಕ್ತಪಡಿಸಿದರು.

ADVERTISEMENT

ಹೊಸಪೇಟೆ– ಕೊಟ್ಟೂರು ರೈಲು ಮಾರ್ಗಕ್ಕೆ ಪುನಃ ಜೀವ
ಬೆಂಗಳೂರು, ಜ. 22– ಹೊಸಪೇಟೆ– ಕೊಟ್ಟೂರು ರೈಲು ಮಾರ್ಗವನ್ನು ಪುನರ್ ಆರಂಭಿಸಲಾಗುವುದು ಎಂದು ರೈಲ್ವೆ ಸಚಿವ ಜಾಫರ್ ಷರೀಫ್ ಭರವಸೆ ನೀಡಿದ್ದಾರೆ.

ಈ ಮಾರ್ಗದ ರೈಲು ಸಂಚಾರವನ್ನು ಪುನರ್ ಆರಂಭಿಸಬೇಕು ಎಂದು ನಗರಕ್ಕೆ ಶನಿವಾರ ಆಗಮಿಸಿದ್ದ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಾಗ ತಮಗೆ ಈ ಭರವಸೆ ನೀಡಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಎಂ.ಪಿ. ಪ್ರಕಾಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.