ADVERTISEMENT

25 ವರ್ಷಗಳ ಹಿಂದೆ: ಶನಿವಾರ 01-6-1996

​ಪ್ರಜಾವಾಣಿ ವಾರ್ತೆ
Published 31 ಮೇ 2021, 18:03 IST
Last Updated 31 ಮೇ 2021, 18:03 IST
   

ಕೇಂದ್ರ ಸಂಪುಟದಲ್ಲಿ ಪ್ರಾದೇಶಿಕ ಪಕ್ಷಗಳು

ನವದೆಹಲಿ, ಮೇ 31– ಪ್ರಾದೇಶಿಕ ಪಕ್ಷಗಳಾದ ಡಿಎಂಕೆ, ಟಿಎಂಸಿ ಹಾಗೂ ತೆಲುಗು ದೇಶಂ, ಸಂಯುಕ್ತ ರಂಗ ನೇತೃತ್ವದ ಸರ್ಕಾರದಲ್ಲಿ ಸೇರಲು ತೀರ್ಮಾನ ಕೈಗೊಂಡಿದ್ದರಿಂದ, ನಾಳೆ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿರುವ ಎಚ್‌.ಡಿ. ದೇವೇಗೌಡ ಅವರ ಮಂತ್ರಿಮಂಡಲ ರಚನೆಗೆ ಇದ್ದ ಅಡಚಣೆ ನಿವಾರಣೆಯಾದಂತಾಯಿತು.

ದೇವೇಗೌಡ ಅವರು ಪ್ರಧಾನಿಯಾಗುವ ಮೂಲಕ ಕರ್ನಾಟಕ ಮೊದಲ ಬಾರಿಗೆ ದೇಶವನ್ನಾಳುವ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪಿ.ವಿ. ನರಸಿಂಹ ರಾವ್ ಅವರ ನಂತರ ಕೆಲ ದಿನಗಳ ಕಾಲ ಬಿಜೆಪಿ ನಾಯಕ ವಾಜಪೇಯಿ ಅವರಿಗೆ ದಕ್ಕುವ ಮೂಲಕ ಪುನಃ ಉತ್ತರ ಭಾರತದ ವಶವಾಗಿದ್ದ ಈ ಸ್ಥಾನ ಮತ್ತೆ ದಕ್ಷಿಣ ಭಾರತದ ಪಾಲಾಗಲಿದೆ.

ADVERTISEMENT

ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ

ಬೆಂಗಳೂರು, ಮೇ 31– ರಾಜ್ಯದ 15ನೇ ಮುಖ್ಯಮಂತ್ರಿಯಾಗಿ ಜೆ.ಎಚ್. ಪಟೇಲ್, ಮೂರನೇ ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಇಂದು ಪ್ರಮಾಣವಚನ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.