ಕಾವೇರಿ: ಚರ್ಚೆಗೆ ಕೋರ್ಟ್ ಸಲಹೆ
ನವದೆಹಲಿ, ಜುಲೈ, 30 (ಪಿಟಿಐ)– ತಮಿಳುನಾಡಿನ ನೀರಾವರಿ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವಂತೆ ಕಾವೇರಿ ವಿವಾದಕ್ಕೆ ಮಾತುಕತೆಯ ಮೂಲಕ ಒಂದು ತಾತ್ಕಾಲಿಕ ಪರಿಹಾರ ಕಂಡುಕೊಳ್ಳುವಂತೆ ಸುಪ್ರೀಂ ಕೋರ್ಟ್ ಇಂದುಕರ್ನಾಟಕ ಹಾಗೂ ತಮಿಳುನಾಡಿನ
ಮುಖ್ಯಮಂತ್ರಿಗಳಿಗೆ ಸೂಚನೆ ನೀಡಿದೆ.
ರಾಜಧಾನಿ ಎಕ್ಸ್‌ಪ್ರೆಸ್ ಈಗವಾರಕ್ಕೆರಡು ಬಾರಿ ಸಂಚಾರ
ನವದೆಹಲಿ, ಜುಲೈ, 30– ಬೆಂಗಳೂರಿನಿಂದ ವಾರಕ್ಕೊಮ್ಮೆ ಇದ್ದ ರಾಜಧಾನಿ ಎಕ್ಸ್‌ಪ್ರೆಸ್ ಇನ್ನು ಮುಂದೆ ಎರಡು ಬಾರಿ ಸಂಚಾರ, ಗೇಜ್ ಪರಿವರ್ತನೆ ಮುಗಿದ ಮೇಲೆ ಹುಬ್ಬಳ್ಳಿ– ಮಿರಜ್ ಮಾರ್ಗವಾಗಿ ಬೆಂಗಳೂರು– ಮುಂಬೈ ನಡುವೆ ವಾರಕ್ಕೆರಡು ಬಾರಿ ಹೊಸದೊಂದು ಸೂಪರ್ ಫಾಸ್ಟ್ ರೈಲು ಸೇರಿದಂತೆ ದೇಶದ ವಿವಿಧ ಭಾಗಗಳಿಗೆ ಮತ್ತೆ ಹದಿನಾಲ್ಕು ಹೊಸ ರೈಲುಗಳ ಸಂಚಾರವನ್ನು ರೈಲ್ವೆ ಸಚಿವ ರಾಂ ವಿಲಾಸ್ ಪಾಸ್ವಾನ್ ಇಂದು ಲೋಕಸಭೆಯಲ್ಲಿ ಪ್ರಕಟಿಸಿದರು.
ಬೆಂಗಳೂರು– ಮುಂಬೈ ನಡುವಣ ರೈಲನ್ನು ಮುಂದೆ ಪ್ರತಿದಿನವೂ ಸಂಚರಿಸುವಂತೆ ಮಾಡಲಾಗುವುದು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.