ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಶನಿವಾರ, 21–10–1995

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 19:19 IST
Last Updated 20 ಅಕ್ಟೋಬರ್ 2020, 19:19 IST
   

ಸಾರಿಗೆ ಖಾಸಗೀಕರಣ: ಸಂಪುಟ ಸಮಿತಿ

ಬೆಂಗಳೂರು, ಅ. 20– ರಾಷ್ಟ್ರೀಕರಣ ವಾಗಿರುವ ಕೆಲವೊಂದು ಮಾರ್ಗಗಳಲ್ಲಿ ಖಾಸಗಿ ಬಸ್‌ಗಳ ಓಡಾಟಕ್ಕೆ ಪರವಾ ನಗಿ, ರಾಜ್ಯ ಸಾರಿಗೆ ಸಂಸ್ಥೆಯನ್ನು ವಿಭಜಿಸಿ ಐದು ಪ್ರತ್ಯೇಕ ನಿಗಮಗಳ ರಚನೆ, ರಾಜಧಾನಿಯಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಬಿಟಿಎಸ್‌ಗೆ ಪರ್ಯಾಯವಾಗಿ ಖಾಸಗಿಯವರಿಗೆ ಅವಕಾಶ.

ಸಾರಿಗೆ ಸಂಸ್ಥೆ ನೌಕರರು ಮೂರು ದಿನ ಮಿಂಚಿನ ಮುಷ್ಕರ ಹೂಡಿ ರಾಜ್ಯದಲ್ಲಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ಹಿನ್ನೆಲೆಯಲ್ಲಿ, ಮುಂದೆ ಇಂಥ ಪರಿಸ್ಥಿತಿ ಉದ್ಭವಿಸದಂತೆ ಮಾಡಲು ಸರ್ಕಾರ ಯೋಚಿಸಿರುವ ಕಾರ್ಯಯೋಜನೆಯ ಸ್ಥೂಲರೂಪ ಇದು.

ADVERTISEMENT

ಕಾಶ್ಮೀರ ಜನ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ

ಜಮ್ಮು ಅ. 20 (ಯುಎನ್ಐ)– ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಸಕ್ತ ರಾಷ್ಟ್ರಪತಿ ಆಡಳಿತದ ಅವಧಿ ಕೊನೆಗೊಳ್ಳುವ ಜನವರಿಗೆ ಮೊದಲೇ ಚುನಾವಣೆ ನಡೆಸಲು ಕೇಂದ್ರ ಮತ್ತು ರಾಜ್ಯ ಆಡಳಿತ ಎಲ್ಲ ಸಿದ್ಧತೆ ನಡೆಸುತ್ತಿವೆ. ಅಭ್ಯರ್ಥಿ ನಿಧನವಾದ ಸಂದರ್ಭದಲ್ಲಿ ಚುನಾವಣೆಯನ್ನು ರದ್ದುಗೊಳಿಸದಂತೆ ಜನ ಪ್ರಾತಿನಿಧ್ಯ ಕಾಯ್ದೆಗೆ (1957) ತಿದ್ದುಪಡಿ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.