ADVERTISEMENT

25 ವರ್ಷಗಳ ಹಿಂದೆ: ಶನಿವಾರ, 28-10-1995

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 0:56 IST
Last Updated 28 ಅಕ್ಟೋಬರ್ 2020, 0:56 IST
   

ರಾಜ್ಯೋತ್ಸವ ಪ್ರಶಸ್ತಿ: ಸರ್ಕಾರದ ಹಸ್ತಕ್ಷೇಪಕ್ಕೆ ಸುಬ್ಬಣ್ಣ ಪ್ರತಿಭಟನೆ

ಬೆಂಗಳೂರು, ಅ. 27– ‘ರಾಜ್ಯೋತ್ಸವದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿರುವುದು ರಾಜ್ಯ ಪ್ರಶಸ್ತಿ ಅಲ್ಲ, ಸರ್ಕಾರಿ ಪಕ್ಷ ನಾಯಕರ ಪ್ರಶಸ್ತಿ’ಗಳಷ್ಟೇ ಎಂದು ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಹಾಗೂ ಖ್ಯಾತ ನಾಟಕಕಾರ ಕೆ.ವಿ. ಸುಬ್ಬಣ್ಣ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

‘ರಾಜ್ಯೋತ್ಸವದ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಿದ ಸರ್ಕಾರವೇ ಸಮಿತಿಯ ಆಯ್ಕೆಯನ್ನು ತಳ್ಳಿಹಾಕಿ ತನ್ನದೇ ಒಂದು ವಿಸ್ತಾರಗೊಂಡ ಪಟ್ಟಿಯನ್ನು ಪ್ರಕಟಿಸಿದೆ’ ಎಂದು ಅವರು ಹೇಳಿಕೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

ADVERTISEMENT

ಪ್ರಶಸ್ತಿಗೆ ‘ಅರ್ಹ ವ್ಯಕ್ತಿ’ಗಳನ್ನು ಸರ್ಕಾರವೇ ಆಯ್ಕೆ ಮಾಡುವುದಿದ್ದರೆ ಸಮಿತಿಯನ್ನು ರಚಿಸುವ ಮೂಲಕ ಸಾರ್ವಜನಿಕ ಹಣವನ್ನು ಪೋಲು ಮಾಡಬೇಕಾಗಿರಲಿಲ್ಲ ಮತ್ತು ಸಮಿತಿಯ ಸದಸ್ಯರಿಗೆ ಹೀಗೆ ಅನಾಗರಿಕವಾಗಿ ಅವಮಾನ ಮಾಡಬೇಕಾಗಿರಲಿಲ್ಲ. ಸರ್ಕಾರದ ಈ ಅನಾಗರಿಕ ಬೇಜವಾಬ್ದಾರಿ ವರ್ತನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಸುಬ್ಬಣ್ಣ ತಿಳಿಸಿದ್ದಾರೆ.

‘ಶಾಲಾ ಮಕ್ಕಳಿಗೆ ಉಪಾಹಾರ ಜನವರಿಯಿಂದ ಜಾರಿ’

ಬೆಂಗಳೂರು, ಅ. 27– ಶಾಲಾ ಮಕ್ಕಳಿಗೆ ಕೇಂದ್ರ ಸರ್ಕಾರದ ನೆರವಿನಲ್ಲಿ ಮಧ್ಯಾಹ್ನ ಉಪಾಹಾರ ನೀಡುವ ಕಾರ್ಯಕ್ರಮ ರಾಜ್ಯದಲ್ಲಿ ಜನವರಿ ಒಂದರಿಂದ ಜಾರಿಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.