ADVERTISEMENT

ಸೋಮವಾರ, 14–3–1994

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 18:47 IST
Last Updated 13 ಮಾರ್ಚ್ 2019, 18:47 IST

ಪ್ರಧಾನಿ ಲಂಡನ್‌ನಲ್ಲಿ– ಬಿಗಿ ಭದ್ರತೆ
ಲಂಡನ್, ಮಾ. 13 (ಪಿಟಿಐ, ಯುಎನ್‌ಐ)– ಪ್ರಧಾನಿ ಪಿ.ವಿನರಸಿಂಹರಾವ್ ಅವರು ಬಂದಿಳಿಯಬೇಕಿದ್ದ ಹೀಥ್ರೋ ವಿಮಾನ ನಿಲ್ದಾಣದಲ್ಲಿ ಐರಿಷ್ ಉಗ್ರಗಾಮಿಗಳು ಶೆಲ್ ದಾಳಿ ನಡೆಸಿದ್ದರಿಂದ ಏರ್ ಇಂಡಿಯಾ ವಿಮಾನವನ್ನು ಇಲ್ಲಿಗೆ 40 ಕಿ.ಮೀ. ದೂರದ ಗ್ಯಾಟ್‌ವಿಕ್ ನಿಲ್ದಾಣದಲ್ಲಿ ಇಳಿಸಲಾಯಿತು.

ಬ್ರಿಟನ್‌ಗೆ ನಾಲ್ಕು ದಿನಗಳ ಅಧಿಕೃತ ಭೇಟಿ ಕಾರ್ಯಕ್ರಮದ ಮೇಲೆ ಆಗಮಿಸಿರುವ ಪ್ರಧಾನಿ ರಾವ್ ಮತ್ತು ಉನ್ನತ ಮಟ್ಟದ ಭಾರತೀಯ ನಿಯೋಗದವರು ಸೇಂಟ್‌ ಜೇಮ್ಸ್ ಕೋರ್ಟ್ ಹೊಟೆಲ್‌ನಲ್ಲಿ ಇಳಿದುಕೊಂಡಿದ್ದು ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಪ್ರಧಾನಿ ಅವರ ಆಗಮನಕ್ಕಿಂತ ನಾಲ್ಕು ತಾಸು ಮೊದಲು ಹೀಥ್ರೋ ವಿಮಾನ ನಿಲ್ದಾಣದಲ್ಲಿ ಐರಿಷ್ ರಿಪಬ್ಲಿಕನ್ ಸೇನೆ ಈ ಶೆಲ್ ದಾಳಿ ನಡೆಸಿತು. ನಾಲ್ಕು ಶೆಲ್‌ಗಳ ಪೈಕಿ ಯಾವುದೂ ಸ್ಫೋಟಗೊಳ್ಳಲಿಲ್ಲ.

ADVERTISEMENT

ನೂತನ ರೈಲು ಮಾರ್ಗ
ನವದೆಹಲಿ, ಮಾ. 13– ಚಾಮರಾಜನಗರ ಮತ್ತು ಮೆಟ್ಟೂಪಾಳ್ಯಂ ನಡುವಣ ಹೊಸ ರೈಲು ಮಾರ್ಗ ಹಾಕಲು ಈ ವರ್ಷ ಸಮೀಕ್ಷೆ ಕಾರ್ಯ ಕೈಗೊಳ್ಳಲಿದ್ದು, ಅದರ ಸಮೀಕ್ಷೆ ವರದಿ ಬಂದ ಮೇಲೆ ಆ ಕಾರ್ಯವನ್ನು ಕೈಗೆತ್ತಿಕೊಳ್ಳುವುದಾಗಿ ರೈಲ್ವೆ ಸಚಿವ ಸಿ.ಕೆ. ಜಾಫರ್ ಷರೀಫ್ ಭರವಸೆ ನೀಡಿದ್ದಾರೆ.

ಈ ಮಾರ್ಗದ ಸಮೀಕ್ಷೆ ಕೈಗೊಳ್ಳುವಂತೆ ಕಳೆದ ತಿಂಗಳು ನಡೆದ ರೈಲ್ವೆ ಸಲಹಾ ಸಮಿತಿ ಸಭೆಯು ತೀರ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.