ADVERTISEMENT

ಸೋಮವಾರ, 9–5–1994

​ಪ್ರಜಾವಾಣಿ ವಾರ್ತೆ
Published 8 ಮೇ 2019, 20:15 IST
Last Updated 8 ಮೇ 2019, 20:15 IST

ಸಿಕ್ಕಿಂ: ವಿಧಾನಸಭೆ ವಿಸರ್ಜನೆ ಯತ್ನ ವಿಫಲ, 17ರಂದು ಭಂಡಾರಿ ಬಹುಮತ ಪರೀಕ್ಷೆ
ಗ್ಯಾಂಗ್ಟಕ್‌, ಮೇ 8 (ಪಿಟಿಐ)– ತಮ್ಮ ಪಕ್ಷದ 18 ಶಾಸಕರಿಂದ ಬಂಡಾಯ ಎದುರಿಸುತ್ತಿರುವ ಸಿಕ್ಕಿಂನ ಮುಖ್ಯಮಂತ್ರಿ ನರ್ ಬಹಾದೂರ್ ಭಂಡಾರಿ ಅವರ ಬಹುಮತವನ್ನು ಪರೀಕ್ಷಿಸುವುದಕ್ಕಾಗಿ ಮೇ 17ರಂದು ವಿಧಾನಸಭೆ ಕರೆಯಲು ರಾಜ್ಯಪಾಲ ಆರ್.ಎಚ್. ತಹಿಲಿಯಾನಿ ಅವರು ಇಂದು ನಿರ್ಧರಿಸಿದರು.

ಇದಕ್ಕೂ ಮುನ್ನ, ಭಂಡಾರಿ ಅವರು ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವಂತೆ ಶಿಫಾರಸು ಮಾಡಿದ್ದರು. ಆದರೆ ಅವರ ಪ್ರಯತ್ನ ಸಫಲವಾಗಲಿಲ್ಲ.

32 ಸದಸ್ಯ ಬಲದ ರಾಜ್ಯ ವಿಧಾನಸಭೆ ಮೇ 17ರಂದು ಬೆಳಿಗ್ಗೆ ಸಮಾವೇಶವಾಗಲಿದೆ. ರಾಜ್ಯದ ಇತಿಹಾಸದಲ್ಲಿಯೇ ತೀವ್ರ ರಾಜಕೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಮುಖ್ಯಮಂತ್ರಿ ಭಂಡಾರಿ ಅವರ ಭವಿಷ್ಯವನ್ನು ಅದು ನಿರ್ಧರಿಸಲಿದೆ.

ADVERTISEMENT

ಅಗ್ನಿ ಕ್ಷಿಪಣಿ ಪರೀಕ್ಷೆ ನಿಲ್ಲದು
ನವದೆಹಲಿ, ಮೇ 8 (ಯುಎನ್‌ಐ)– ಅಗ್ನಿ ಅಥವಾ ಇಂಥ ಇತರ ಯಾವುದೇ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಅಧಿಕೃತ ಮೂಲಗಳು ಇಂದು ಇಲ್ಲಿ ಸ್ಪಷ್ಟಪಡಿಸಿವೆ.

ಕ್ಷಿಪಣಿ ಪರೀಕ್ಷೆ ಪೂರ್ವ ನಿರ್ಧರಿತ ಕಾರ್ಯಕ್ರಮದಂತೆ ಮುಂದುವರಿಯುತ್ತದೆ ಎಂದು ಅವು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.