ADVERTISEMENT

ಮಂಗಳವಾರ, 2–8–1994

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2019, 19:43 IST
Last Updated 1 ಆಗಸ್ಟ್ 2019, 19:43 IST

ಶೇ 80 ಮೀಸಲು ಜಾರಿ ಇಲ್ಲ: ಸುಪ್ರೀಂ ಕೋರ್ಟಿಗೆ ರಾಜ್ಯ ವಾಗ್ದಾನ
ನವದೆಹಲಿ, ಆ.1 (ಪಿಟಿಐ)– ಮೀಸಲು ಪ್ರಮಾಣವನ್ನು ಶೇಕಡ 80ಕ್ಕೆ ಏರಿಸಿ ಈಚೆಗೆ ತಾನು ಮಾಡಿದ ಆಜ್ಞೆಯನ್ನು ಜಾರಿಗೆ ತರುವುದಿಲ್ಲ ಎಂದು ಕರ್ನಾಟಕವು ಸುಪ್ರೀಂ ಕೋರ್ಟಿಗೆ ಇದು ವಾಗ್ದಾನ ನೀಡಿತು.

ಮೀಸಲು ಪ್ರಮಾಣವನ್ನು ಕರ್ನಾಟಕ ಸರ್ಕಾರ ಶೇಕಡ 77ಕ್ಕೆ ಏರಿಸಿ ಏಪ್ರಿಲ್‌ನಲ್ಲಿ ಮಾಡಿದ ಆಜ್ಞೆ ಹಾಗೂ ಆನಂತರ ಶೇಕಡ 80ಕ್ಕೆ ಏರಿಸಿ ಜುಲೈಯಲ್ಲಿ ಮಾಡಿದ ಆಜ್ಞೆಯ ಕ್ರಮಬದ್ಧತೆಯನ್ನು ಒಕ್ಕಲಿಗರ ಸಂಘ ಹಾಗೂ ಇತರ ಕೆಲವರು ಪ್ರಶ್ನಿಸಿ ಸಲ್ಲಿಸಿರುವ ರಿಟ್ ಅರ್ಜಿ ಪರಿಶೀಲನೆ ಕಾಲದಲ್ಲಿ ಕರ್ನಾಟಕ ಸರ್ಕಾರ ಈ ಭರವಸೆ ನೀಡಿತು.

ಇದೇ ಕಾಲದಲ್ಲಿ ತಮಿಳುನಾಡು ಸರ್ಕಾರ ಸಂವಿಧಾನ ಗೊತ್ತುಪಡಿಸಿದ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಸ್ಥಾನ ಮೀಸಲಿಡಲು ನಿರ್ಧರಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳು ಕೋರ್ಟಿನ ಇನ್ನೊಂದು ಪೀಠದ ಮುಂದೆ ವಿಚಾರಣೆಗೆ ಬಂದವು. ತಮಿಳುನಾಡು ಸರ್ಕಾರದ ಈ ಕ್ರಮ ಸಂವಿಧಾನ ಸಮ್ಮತವಾಗಿದೆಯೇ ಎಂಬುದನ್ನು ನಿರ್ಧರಿಸಲು ಸಂವಿಧಾನ ಪೀಠವೊಂದಕ್ಕೆ ಒಪ್ಪಿಸಲಾಯಿತು.

ADVERTISEMENT

ಪ್ರಥಮ ಗುರುತು ಚೀಟಿ
ಚಂಡೀಗಡ, ಆ. 1 (ಪಿಟಿಐ)– ಮುಖ್ಯ ಚುನಾವಣಾ ಆಯುಕ್ತ ಟಿ.ಎನ್. ಶೇಷನ್ ಅವರು ರಾಷ್ಟ್ರದ ಪ್ರಥಮ ಚುನಾವಣಾ ಗುರುತಿನ ಚೀಟಿಯನ್ನು ಹರಿಯಾಣದ ನಿಲೋಖೇರಿಯಲ್ಲಿ ಆ. 4ರಂದು ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.