ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 20–1–1998

​ಪ್ರಜಾವಾಣಿ ವಾರ್ತೆ
Published 19 ಜನವರಿ 2023, 19:27 IST
Last Updated 19 ಜನವರಿ 2023, 19:27 IST
   

ಸಮಾನ ಪ್ರಣಾಳಿಕೆಯಲ್ಲಿ ಸ್ಪರ್ಧೆಗೆ ರಂಗ ನಿರ್ಧಾರ
ಹೈದರಾಬಾದ್‌, ಜ. 19–
ಒಂದೇ ಪ್ರಣಾಳಿಕೆಯನ್ನು ಮುಂದಿಟ್ಟುಕೊಂಡು ಲೋಕಸಭಾ ಚುನಾವಣೆಯನ್ನು ಎದುರಿಸಲು 13 ಘಟಕ ಪಕ್ಷಗಳ ಸಂಯುಕ್ತ ರಂಗ ಇಂದು ನಿರ್ಧರಿಸಿದೆ.

ಇಂದು ಇಲ್ಲಿ ನಡೆದ ರಂಗದ ನಿರ್ಣಾಯಕ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣಾ ಪ್ರಣಾಳಿಕೆಯನ್ನು ಜ. 30ರಂದು ದೆಹಲಿಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಸಭೆಯ ನಂತರ ರಂಗದ ವಕ್ತಾರ ಎಸ್‌. ಜೈಪಾಲ್‌ ರೆಡ್ಡಿ ಅವರು ಪತ್ರಕರ್ತರಿಗೆ ತಿಳಿಸಿದರು.

ಪ್ರಣಾಳಿಕೆಯಲ್ಲಿ ಬೊಫೋರ್ಸ್‌ ವಿಷಯವೂ ಸೇರಿದಂತೆ ಭ್ರಷ್ಟಾಚಾರ ನಿರ್ಮೂಲನೆಗೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ADVERTISEMENT

ಬಿಎಸ್‌ಪಿ ಜತೆ ಮೈತ್ರಿಗೆ ಬಂಗಾರಪ್ಪ ನಿರ್ಧಾರ
ಬೆಂಗಳೂರು, ಜ. 19–
ಜನತಾದಳದೊಂದಿಗೆ ಚುನಾವಣಾ ಮೈತ್ರಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ನೇತೃತ್ವದ ಕರ್ನಾಟಕ ವಿಕಾಸ ಪಕ್ಷವು ಕಾನ್ಶಿರಾಂ ನೇತೃತ್ವದ ಬಹುಜನ ಸಮಾಜ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧವಾಗಿದೆ.

ಹೊಂದಾಣಿಕೆ ಸಂಬಂಧ ರಾಜ್ಯ ಜನತಾದಳದ ಮುಖಂಡರು ಹಾಗೂ ಬಂಗಾರಪ್ಪ ಅವರ ನಡುವೆ ಎರಡು ಸುತ್ತಿನ ಮಾತುಕತೆ ನಡೆದರೂ ಸ್ಥಾನಗಳ ಹಂಚಿಕೆ ಯಲ್ಲಿ ಎರಡೂ ಪಕ್ಷಗಳ ಮುಖಂಡರ ನಡುವೆ ಒಮ್ಮತ ಏರ್ಪಡದಿದ್ದರಿಂದ ಹೊಂದಾಣಿಕೆ ಮಾತುಕತೆ ವಿಫಲವಾಯಿತು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.