ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 19 ಜನವರಿ 1998

ಪ್ರಜಾವಾಣಿ ವಿಶೇಷ
Published 18 ಜನವರಿ 2023, 21:16 IST
Last Updated 18 ಜನವರಿ 2023, 21:16 IST
   

ಮುಖ್ಯ ನ್ಯಾಯಮೂರ್ತಿ ಪುನ್ಚಿ ಪ್ರಮಾಣವಚನ
ನವದೆಹಲಿ, ಜ. 18–
ಸುಪ್ರೀಂ ಕೋರ್ಟಿನ 28ನೇ ಮುಖ್ಯ ನ್ಯಾಯಮೂರ್ತಿಯಾಗಿ, ಮದನ್‌ ಮೋಹನ್‌ ಪುನ್ಚಿ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು.

ರಾಷ್ಟ್ರಪತಿ ಭವನದ ಅಶೋಕಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ಕೆ.ಆರ್‌.ನಾರಾಯಣನ್‌ ಅವರು ಪುನ್ಚಿ ಅವರಿಗೆ ಪ್ರಮಾಣವಚನ ಬೋಧಿಸಿದರು.

ದಳಕ್ಕೆ ಜಾಲಪ್ಪ ರಾಜೀನಾಮೆ
ನವದೆಹಲಿ, ಜ. 18–
ಕಳೆದ ಕೆಲವು ವಾರಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ವೈಮನಸ್ಯ ಹೊಂದಿದ್ದ ಕೇಂದ್ರ ಜವಳಿ ಸಚಿವ ಆರ್‌.ಎಲ್‌.ಜಾಲಪ್ಪ ಅವರು ಇಂದು ಅಂತಿಮವಾಗಿ ಜನತಾದಳದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು.

ADVERTISEMENT

ಇಂದು ಬೆಳಿಗ್ಗೆ ಇಲ್ಲಿ ಜನತಾದಳದ ಅಧ್ಯಕ್ಷ ಶರದ್‌ ಯಾದವ್‌ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರವನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.