
ಪ್ರಜಾವಾಣಿ ವಾರ್ತೆ
ರಾಜ್ ಪುತ್ರರ ಮನವಿ ತಿರಸ್ಕರಿಸಿದ ನೆಡುಮಾರನ್
ಚೆನ್ನೈ. ನ.8 (ಯುಎನ್‌ಐ)– ಡಾ. ರಾಜ್‌ಕುಮಾರ್ ಬಿಡುಗಡೆಗಾಗಿ ವೀರಪ್ಪನ್ ಜತ ಸಂಧಾನ ನಡೆಸಲು ಮತ್ತೆ ಕಾಡಿಗೆ ತೆರಳುವಂತೆ ರಾಜ್ ಪುತ್ರರು ಮಾಡಿದ ಮನವಿಯನ್ನು ತಮಿಳು ರಾಷ್ಟ್ರೀಯವಾದಿ ಚಳವಳಿ ನಾಯಕ ಪಿ. ನೆಡುಮಾರನ್ ಇಂದು ಇಲ್ಲಿ ತಳ್ಳಿ ಹಾಕಿದರು.
ಸಂಧಾನಕಾರರ ತಂಡದಿಂದ ಹೊರಗುಳಿಯಲು ತಾವು ಕೈಗೊಂಡಿರುವ ನಿರ್ಧಾರವೇ ಅಂತಿಮ ಎಂದು ಅವರು ಅವರು ಹೇಳಿದರು. ರಾಜ್ ಪುತ್ರರಾದ ಶಿವರಾಜ್‌ಕುಮಾರ್, ಹಾಗೂ ರಾಘವೇಂದ್ರ ರಾಜ್‌ಕುಮಾರ್ ಇಂದು ನೆಡುಮಾರನ್ ಮನೆಗೆ ತೆರಳಿ ಅವರನ್ನು ಭೇಟಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.