ADVERTISEMENT

25 ವರ್ಷಗಳ ಹಿಂದೆ: ಭಾನುವಾರ, 25–2–1996

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 16:52 IST
Last Updated 24 ಫೆಬ್ರುವರಿ 2021, 16:52 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚುನಾವಣೆ ವೆಚ್ಚ ಸರ್ಕಾರ ಭರಿಸಲು ಪ್ರತಿಪಕ್ಷ ಆಗ್ರಹ

ನವದೆಹಲಿ, ಫೆ. 24 (ಪಿಟಿಐ)– ಚುನಾವಣಾ ಸುಧಾರಣೆ ಕುರಿತು ದಿನೇಶ್ ಗೋಸ್ವಾಮಿ ಸಮಿತಿ ನೀಡಿರುವ ವರದಿಯನ್ನು ಸಮರ್ಪಕವಾಗಿ ಜಾರಿ ಮಾಡುವ ಬದಲು ಬಿಡಿಬಿಡಿಯಾಗಿ ಕಾರ್ಯಾಚರಣೆಗೆ ತರುತ್ತಿರುವ ಸರ್ಕಾರದ ನಿಲುವನ್ನು ಪ್ರತಿಪಕ್ಷಗಳು ಖಂಡಿಸಿವೆ. ಚುನಾವಣೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಹಾಗೂ ಲೋಕಪಾಲ ಮಸೂದೆಯನ್ನು ಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಪಡಿಸಿವೆ.

ಚುನಾವಣೆ ವ್ಯವಸ್ಥೆಗಳಲ್ಲಿನ ಲೋಪ ಗಳನ್ನು ನಿವಾರಿಸಲು ಚುನಾವಣೆ ವೆಚ್ಚ ಮಿತಿಯನ್ನು ಹೆಚ್ಚಿಸಲು ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಪ್ರತಿಪಕ್ಷಗಳು ಅತೃಪ್ತಿ ಸೂಚಿಸಿವೆ.

ADVERTISEMENT

ಸರ್ಕಾರಿ ನೌಕರರ ಸಂಘ ತನಿಖೆಗೆ ಆಗ್ರಹ

ಬೆಂಗಳೂರು, ಫೆ. 24– ರಾಜ್ಯದಲ್ಲಿನ ಸರಿ ಸುಮಾರು ಐದು ಲಕ್ಷದಷ್ಟಿರುವ ಸರ್ಕಾರಿ ನೌಕರರಲ್ಲಿ ಅನುಮಾನಕ್ಕೆ ಕಾರಣವಾಗಿರುವ ತನಿಖಾ ವರದಿಯನ್ನು ಬದಿಗೊತ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ಮತ್ತು ಅಧಿಕಾರ ದುರುಪಯೋಗದ ತನಿಖೆ ಯನ್ನುದಕ್ಷ–ನ್ಯಾಯ ನಿಷ್ಠುರ ಅಧಿಕಾರಿ ಯೊಬ್ಬರಿಂದ ನಡೆಸಬೇಕು ಎಂದು ಸಂಘದ ಅಧ್ಯಕ್ಷ ಕೆ.ಸಿಪ್ಪೇಗೌಡ ಇಂದು ಇಲ್ಲಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.