ADVERTISEMENT

25 ವರ್ಷಗಳ ಹಿಂದೆ: ದೇವೇಗೌಡ, ಕೃಷ್ಣ, ಸಿದ್ದರಾಮಯ್ಯಗೆ ಕೋರ್ಟ್‌ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 28 ಜುಲೈ 2024, 0:02 IST
Last Updated 28 ಜುಲೈ 2024, 0:02 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ದೇವೇಗೌಡ, ಕೃಷ್ಣ, ಸಿದ್ದರಾಮಯ್ಯಗೆ ಕೋರ್ಟ್‌ ನೋಟಿಸ್‌

ಬೆಂಗಳೂರು, ಜುಲೈ 27– ಲೋಕಾಯುಕ್ತಕ್ಕೆ ವಾರ್ಷಿಕ ಆದಾಯ ವಿವರಗಳನ್ನು ಸಲ್ಲಿಸಿಲ್ಲ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಎಸ್‌.ಎಂ. ಕೃಷ್ಣ ಸೇರಿದಂತೆ ಹಲವು ಮಾಜಿ ಮತ್ತು ಹಾಲಿ ಶಾಸಕರಿಗೆ ಬರುವ ಆಗಸ್ಟ್‌ 5ರಂದು ಕೋರ್ಟ್‌ ಮುಂದೆ ಹಾಜರಾಗುವಂತೆ ರಾಜ್ಯ ಹೈಕೋರ್ಟ್‌ ಇಂದು ಆದೇಶಿಸಿತು.

ಲೋಕಾಯುಕ್ತ ಕಾಯ್ದೆ ಅನ್ವಯ, ಲೋಕಾಯುಕ್ತಕ್ಕೆ ತಮ್ಮ ವಾರ್ಷಿಕ ಆದಾಯದ ವಿವರಗಳನ್ನು ಸಲ್ಲಿಸದ ಈ ನಾಯಕರನ್ನು ಸುಸ್ತಿದಾರರು ಹಾಗೂ ಪ್ರತಿವಾದಿಗಳು ಎಂದು ಪರಿಗಣಿಸುವಂತೆ ಹೊಟ್ಟೆ ಪಕ್ಷ ರಂಗಸ್ವಾಮಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.