ಬೆಂಗಳೂರು: ಜುಲೈ 6– ರಾಜ್ಯದ ಹಲವೆಡೆ ಮುಂಗಾರು ಚುರುಕಾಗಿದ್ದು, ಸೇಡಂ ಪಟ್ಟಣದ ಪಕ್ಕದಲ್ಲೇ ಹರಿಯುವ ಕಮಲಾವತಿ ನದಿ ಉಕ್ಕಿ ಹರಿದು 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಮರವೊಂದು ಜೀಪ್ ಮೇಲೆ ಬಿದ್ದು ಅದರ ಚಾಲಕ ಮೃತಪಟ್ಟಿದ್ದಾರೆ. ಕಾರವಾರದಲ್ಲಿ ಇಂದು ಭಾರಿ ಮಳೆ ಸುರಿದ ಕಾರಣ ಶಾಲಾ– ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಮಂಗಳೂರು, ಮಡಿಕೇರಿ ಜಿಲ್ಲೆಗಳಲ್ಲೂ ಬಿರುಸಿನ ಮಳೆಯಾಗಿರುವುದು ವರದಿಯಾಗಿದೆ.
ನವದೆಹಲಿ, ಜುಲೈ 6 (ಯುಎನ್ಐ)– ಟೊಮೆಟೊ ರಸ, ವಿಟಮಿನ್ ಸಿ ಮತ್ತು ಇ ಗಳ ಬಳಕೆಯಿಂದ ಮಧುಮೇಹಿಗಳ ಹೃದಯಸ್ತಂಭನ ತಡೆಯಲು ಸಾಧ್ಯ. ರೋಗ ಕಾಣಿಸಿಕೊಳ್ಳುವವರೆಗೆ ಕಾಯದೇ ಟೊಮೆಟೊ, ಹಣ್ಣು, ತರಕಾರಿ ಹೆಚ್ಚಾಗಿ ಸೇವಿಸಿದಲ್ಲಿ ಮಧುಮೇಹ ಬೇಗ ಬಾರದಂತೆ ನೋಡಿಕೊಳ್ಳಬಹುದು ಎಂದು ದೆಹಲಿ ಮಧುಮೇಹ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಎ.ಕೆ. ಜಿಂಗನ್ ಸಲಹೆ ನೀಡಿದ್ದಾರೆ. ಟೊಮೆಟೊ ರಸದಲ್ಲಿರುವ ಲೈಕೊಪಿನ್ ಕೊಲೆಸ್ಟರಾಲ್
ಆಮ್ಲೀಕರಣವನ್ನು ತಪ್ಪಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.