ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ | ಶುಕ್ರವಾರ, 27–10–1970

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 19:31 IST
Last Updated 26 ಅಕ್ಟೋಬರ್ 2020, 19:31 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಸತ್ಯಕಾಮ, ಚಂಪಾ, ಜಯಂತಿ ಸೇರಿ 40 ಮಂದಿ ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರು, ಅ. 26– ಹೆಸರಾಂತ ಸಾಹಿತಿಗಳಾದ ಸತ್ಯಕಾಮ, ಚಂದ್ರಶೇಖರ ಪಾಟೀಲ, ಹಿರಿಯ ಚಿತ್ರತಾರೆ ಜಯಂತಿ, ಪರಿಸರವಾದಿ ಸುರೇಶ್ ಹೆಬ್ಳೀಕರ್, ನ್ಯಾಯಮೂರ್ತಿ ಎನ್.ಡಿ. ವೆಂಕಟೇಶ್ ಸೇರಿದಂತೆ ರಾಜ್ಯದ ವಿವಿಧ ಕ್ಷೇತ್ರ
ಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 40 ಮಂದಿ ಗಣ್ಯರನ್ನು 1995ನೇ ಸಾಲಿನ ರಾಜ್ಯ ಪ್ರಶಸ್ತಿಗಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ.

ಕನ್ನಡ ಮತ್ತು ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಬಿ.ಟಿ. ಲಲಿತಾ ನಾಯಕ್ ಅವರು ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿಯನ್ನು ಇಂದು ಇಲ್ಲಿ ಬಿಡುಗಡೆ ಮಾಡಿ, ನವೆಂಬರ್ 1ರಂದು ನಡೆಯುವ ಸಮಾರಂಭದಲ್ಲಿ, ಪ್ರಶಸ್ತಿ ಪಡೆದವರಿಗೆ 10 ಸಾವಿರ ರೂಪಾಯಿಗಳ ಮೌಲ್ಯದ ಚಿನ್ನದ ಪದಕ, ಶಾಲು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದೆಂದು ಪತ್ರಕರ್ತರಿಗೆ ತಿಳಿಸಿದರು.

ADVERTISEMENT

ಕಳೆದ ಮೂರು ತಿಂಗಳ ಹಿಂದೆ ನೇಮಕ ಮಾಡಲಾಗಿದ್ದ ಕೆ.ವಿ. ಸುಬ್ಬಣ್ಣ ಅಧ್ಯಕ್ಷತೆಯ ಆರು ಮಂದಿ ಸದಸ್ಯರಿದ್ದ ಸಮಿತಿ 24 ಮಂದಿ ಗಣ್ಯರನ್ನು ಗುರುತಿಸಿ ಶಿಫಾರಸು ಮಾಡಿತ್ತು.

ಆ ಪೈಕಿ ಒಬ್ಬರು ಹಿಂದೆಯೇ ಪ್ರಶಸ್ತಿ ಪಡೆದವರಾಗಿದ್ದರಿಂದ ಅವರ ಹೆಸರನ್ನು ಕೈಬಿಡಬೇಕಾಯಿತು.

ಹೆಸರಾಂತ ಲೇಖಕ ಪಿ. ಲಂಕೇಶ್ ಅವರು ಆಯ್ಕೆಯಾದ ಪಟ್ಟಿಯಲ್ಲಿದ್ದರು. ಆದರೆ, ಅವರು ಅನಾರೋಗ್ಯದ ಕಾರಣ ನೀಡಿ
ತಮಗೆ ಪ್ರಶಸ್ತಿ ಬೇಡ ಎಂದು ತಿಳಿಸಿದರು.

ಇದರಿಂದಾಗಿ ಈ ಪಟ್ಟಿ 22ಕ್ಕೆ ಇಳಿಯಿತು. ಆದರೆ ಸರ್ಕಾರ ಇನ್ನೂ 18 ಮಂದಿಯನ್ನು ಗುರುತಿಸಿ ಒಟ್ಟು 40 ಮಂದಿಗೆ ಪ್ರಶಸ್ತಿ ನೀಡಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.