ADVERTISEMENT

25 ವರ್ಷಗಳ ಹಿಂದೆ | ಪಟೇಲ್‌ ನಿಲುವಿಗೆ ವಿರೋಧ: ವಿಭಜನೆಯತ್ತ ದಳ

ಪ್ರಜಾವಾಣಿ ವಿಶೇಷ
Published 17 ಜುಲೈ 2024, 21:59 IST
Last Updated 17 ಜುಲೈ 2024, 21:59 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಭಾನುವಾರ 18-7-1999

ಪಟೇಲ್‌ ನಿಲುವಿಗೆ ವಿರೋಧ ವಿಭಜನೆಯತ್ತ ದಳ

ನವದೆಹಲಿ, ಜುಲೈ 17– ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕೆಂಬ ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರ ವಿಚಾರಧಾರೆಗೆ ಇಂದು ನಡೆದ ದಳದ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು.

ADVERTISEMENT

ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ಸಮಾನ ದೂರದಲ್ಲಿದ್ದು, ಕೆಲವು ಮಿತ್ರಪಕ್ಷಗಳೊಡನೆ ಸ್ಥಳೀಯವಾಗಿ ಸ್ಥಾನ ಹೊಂದಾಣಿಕೆಗೆ ಒಮ್ಮತ ಮೂಡಿಬರುವ ಲಕ್ಷಣಗಳು ಇಂದು ರಾತ್ರಿ ಕಂಡುಬಂದವು. ಇದು ಸಾಧ್ಯವಾಗದಿದ್ದರೆ ಕರ್ನಾಟಕದ ಜನತಾದಳ ಹೋಳಾಗುವುದು ಅನಿವಾರ್ಯವಾಗಬಹುದು.

ಬಿಹಾರದಲ್ಲಿ ಸೇನೆಗೆ ಸೇರಲು ನೂಕುನುಗ್ಗಲು, ಗೋಲಿಬಾರ್‌: 3 ಸಾವು

ಪಟ್ನಾ, ಜುಲೈ 17 (ಪಿಟಿಐ)– ಸೇನೆಗೆ ಸೇರ
ಬಯಸಿ ಬಂದಿದ್ದ ಸಂದರ್ಶನಾರ್ಥಿಯೊಬ್ಬ ಪೊಲೀಸ್‌ ಅಧಿಕಾರಿ ಬಳಿ ಇದ್ದ ಪಿಸ್ತೂಲ್‌ ಕಸಿದುಕೊಂಡು ಅವರ ಮೇಲೇ ಗುಂಡು ಹಾರಿಸಿದಾಗ ಉಂಟಾದ ನೂಕುನುಗ್ಗಲು ಹಾಗೂ ಗುಂಪನ್ನು ನಿಯಂತ್ರಿಸಲು ಪ್ರತಿಯಾಗಿ ಪೊಲೀಸರು ಹಾರಿಸಿದ ಗುಂಡೇಟಿಗೆ ಒಟ್ಟು ಮೂವರು ಮೃತಪಟ್ಟು, ಇತರ 30 ಮಂದಿ ಗಾಯಗೊಂಡಿರುವ ಘಟನೆ ದರ್ಬಾಂಗಾ ಹಾಗೂ ಚಾಪ್ರಾದಲ್ಲಿ ಇಂದು ಸಂಭವಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.