ಪುರುಷರು ನಾಪತ್ತೆ, ಉದ್ವಿಗ್ನ ಪರಿಸ್ಥಿತಿ
ತುಮಕೂರು, ಆಗಸ್ಟ್ 24– ಗುಬ್ಬಿ ತಾಲ್ಲೂಕಿನ ಜಿ. ಅರಿವೇಸಂದ್ರ ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಇಡೀ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ಗ್ರಾಮದಲ್ಲಿ ಸವರ್ಣೀಯರು ಮತ್ತು ದಲಿತರ ಮನೆಗಳ ಎಲ್ಲ ಗಂಡಸರು ತಲೆಮರೆಸಿಕೊಂಡಿದ್ದು, ಹೆಂಗಸರು ಮತ್ತು ಮಕ್ಕಳು ಮಾತ್ರ ಭೀತಿಯ ನೆರಳಲ್ಲಿ ಕಾಲ ಕಳೆಯುತ್ತಿರುವುದು ಸ್ಥಳಕ್ಕೆ ಭೇಟಿ ನೀಡಿದ ‘ಪ್ರಜಾವಾಣಿ’ಯ ಗಮನಕ್ಕೆ ಬಂತು.
ಅಮೆರಿಕ ಟೆನಿಸ್: ಪೇಸ್–ಮಹೇಶ್
ಬೆಂಗಳೂರು, ಆಗಸ್ಟ್ 24– ಭಾರತದ ಅಗ್ರಮಾನ್ಯ ಟೆನಿಸ್ ಜೋಡಿ ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿ ಸೋಮವಾರದಿಂದ ನ್ಯೂಯಾರ್ಕ್‌ನಲ್ಲಿ ಆರಂಭವಾಗುವ ಅಮೆರಿಕ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಜತೆಯಾಗಿ ಆಡಲು ನಿರ್ಧರಿಸಿದ್ದಾರೆ.
ಈ ವಿಷಯವನ್ನು ಮಹೇಶ್ ಅವರ ತಂದೆ ಕೃಷ್ಣ ಭೂಪತಿ, ಇಂದು ‘ಪ್ರಜಾವಾಣಿ’ಗೆ ತಿಳಿಸಿದರು.
1999ರಲ್ಲಿ ಫ್ರೆಂಚ್ ಮತ್ತು ವಿಂಬಲ್ಡನ್ ಟೆನಿಸ್ ಟೂರ್ನಿಯ ಡಬಲ್ಸ್ ಪ್ರಶಸ್ತಿಗಳಿಸಿ ವಿಶ್ವದ ಅಗ್ರಮಾನ್ಯ ಡಬಲ್ಸ್ ಜೋಡಿಯಾಗಿ ಹೊರಹೊಮ್ಮಿದ್ದ ಲಿಯಾಂಡರ್–ಮಹೇಶ್ ಜೋಡಿ ಕಳೆದ ವರ್ಷ ಜತೆ ಆಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.