ADVERTISEMENT

25 ವರ್ಷಗಳ ಹಿಂದೆ: ಸಚಿವ ಟಿ. ಜಾನ್‌ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 23:21 IST
Last Updated 31 ಜನವರಿ 2026, 23:21 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಸಚಿವ ಟಿ. ಜಾನ್‌ ರಾಜೀನಾಮೆ

ಬೆಂಗಳೂರು, ಜ.31– ಗುಜರಾತಿನಲ್ಲಿ ಸಂಭವಿಸಿದ ಭೂಕಂಪಕ್ಕೆ ಸಂಬಂಧಿಸಿ ದಂತೆ ಶಾಲೆಯ ಸಮಾರಂಭ ಒಂದರಲ್ಲಿ ತಾವು ಆಡಿದ ಮಾತು ವಿವಾದಕ್ಕೆ ಎಡೆಮಾಡುವುದೆಂಬುದನ್ನು ಮನಗಂಡ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ವಿಮಾನಯಾನ ಸಚಿವ ಟಿ. ಜಾನ್‌ ಅವರು ಇಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

ಗುಜರಾತ್‌ನಲ್ಲಿ ಕ್ರೈಸ್ತ ಸಮುದಾಯದ ಮೇಲೆ ನಡೆದ ದೌರ್ಜನ್ಯ, ಚರ್ಚ್‌ಗಳ ಧ್ವಂಸ ಮಾಡಿದ ಪರಿಣಾಮವಾಗಿ ಅಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಮಂದಿ ಸತ್ತಿದ್ದಾರೆ ಎಂಬ ಜಾನ್‌ ಅವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.