ADVERTISEMENT

25 ವರ್ಷಗಳ ಹಿಂದೆ ಈ ದಿನ: ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 25 ಹುದ್ದೆ ಮೀಸಲು

ಪ್ರಜಾವಾಣಿ ವಿಶೇಷ
Published 23 ನವೆಂಬರ್ 2025, 19:11 IST
Last Updated 23 ನವೆಂಬರ್ 2025, 19:11 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಗ್ರಾಮೀಣ ಅಭ್ಯರ್ಥಿಗಳಿಗೆ ಶೇ 25 ಹುದ್ದೆ ಮೀಸಲು

ಬೆಂಗಳೂರು, ನ. 23– ರಾಜ್ಯ ಸರ್ಕಾರಿ ಸಿವಿಲ್‌ ಸೇವೆಗಳಲ್ಲಿ ಗ್ರಾಮೀಣ
ಅಭ್ಯರ್ಥಿಗಳಿಗೆ ಶೇ 25ರಷ್ಟು ಹುದ್ದೆ ಗಳನ್ನು ಮೀಸಲಿಡುವ ಮಸೂದೆಗೆ ಜನತಾದಳ (ಯು) ಸದಸ್ಯರ ವಿರೋಧದ ನಡುವೆ ಇಂದು ವಿಧಾನಸಭೆ ಅಂಗೀಕಾರ ನೀಡಿತು.

ADVERTISEMENT

ಮಸೂದೆ ಮಂಡನೆ ಸಮಯದಲ್ಲಿ ಶೇ 10ರಷ್ಟು ಹುದ್ದೆಗಳನ್ನು ಮೀಸಲು ಇಡುವುದಾಗಿ ಸರ್ಕಾರ ಪ್ರಕಟಿಸಿತ್ತು. ಆದರೆ, ವಿರೋಧಿ ಸದಸ್ಯರು ಶೇ 70ರಷ್ಟು ಮೀಸಲಾತಿ ಬೇಕು ಎಂದು ಒಂದು ತಿದ್ದುಪಡಿಯನ್ನೇ ಮಂಡಿಸಿದಾಗ ಸರ್ಕಾರವೇ ಮುಂದಾಗಿ ಮೀಸಲು ಹುದ್ದೆಗಳ ಪ್ರಮಾಣವನ್ನು
ಶೇ 25ಕ್ಕೆ ಏರಿಸಿತು.

ಪ್ರಯೋಗಾಲಯಕ್ಕೆ ದಾಖಲೆ

ಮೈಸೂರು, ನ. 23– ಎಂಬಿಬಿಎಸ್‌ ಪರೀಕ್ಷೆ ಉತ್ತರಪತ್ರಿಕೆ ಮೌಲ್ಯಮಾಪನ ಅಂಕಪಟ್ಟಿ ತಿದ್ದಿರುವ ಪ್ರಕರಣಗಳನ್ನು ಗುರುತಿಸಲು ಫೊರೆನ್ಸಿಕ್ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಇಂದು ಇಲ್ಲಿ ನಡೆದ ಮೈಸೂರು ವಿ.ವಿ ಸಿಂಡಿಕೇಟ್ ಸಭೆ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.