ADVERTISEMENT

25 ವರ್ಷಗಳ ಹಿಂದೆ ಈ ದಿನ: ಮೋಸದಾಟ: ಅಜರ್‌ ವಿರುದ್ಧ ಆರೋಪ ಸಾಬೀತು

ಪ್ರಜಾವಾಣಿ ವಿಶೇಷ
Published 27 ನವೆಂಬರ್ 2025, 19:13 IST
Last Updated 27 ನವೆಂಬರ್ 2025, 19:13 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ದಲಿತರ ಮೇಲಿನ ದೌರ್ಜನ್ಯ ತನಿಖೆಗೆ ವಿಶೇಷ ಕೋರ್ಟ್‌

ಬೆಂಗಳೂರು, ನ. 27– ದಲಿತರ ವಿರುದ್ಧ ನಡೆದ ದೌರ್ಜನ್ಯ ಕುರಿತ ಸುಮಾರು 2,000 ಬಾಕಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ರಾಜ್ಯದಲ್ಲಿ ಒಂದು ವಿಶೇಷ ನ್ಯಾಯಾಲಯವನ್ನು ಸ್ಥಾಪಿಸುವಂತೆ ಸರ್ಕಾರ ಹೈಕೋರ್ಟನ್ನು ಕೋರಲಿದೆ.

ADVERTISEMENT

ಈ ವಿಚಾರವನ್ನು ಸಮಾಜ ಕಲ್ಯಾಣ ಸಚಿವ ಕಾಗೋಡು ತಿಮ್ಮಪ್ಪ ಇಂದು ವರದಿಗಾರರಿಗೆ ತಿಳಿಸಿದರು.

ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿನ ದೌರ್ಜನ್ಯ ಸಮಿತಿ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ಸಭೆ ಸೇರಿ ಹೈಕೋರ್ಟಿಗೆ ಮನವಿ ಸಲ್ಲಿಸುವ ನಿರ್ಣಯ ಕೈಗೊಳ್ಳಲಿದೆ ಎಂದು ಅವರು ತಿಳಿಸಿದರು.

ಮೋಸದಾಟ: ಅಜರ್‌ ವಿರುದ್ಧ ಆರೋಪ ಸಾಬೀತು

ನವದೆಹಲಿ, ನ. 27– ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹಮ್ಮದ್‌ ಅಜರುದ್ದೀನ್ ಅವರು, ಕ್ರಿಕೆಟ್‌ ಮೋಸದಾಟದಲ್ಲಿ ಪಾಲ್ಗೊಂಡಿರುವುದು ಸಾಬೀತಾಗಿದೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅಧ್ಯಕ್ಷ ಎ.ಸಿ. ಮುತ್ತಯ್ಯ ಹೇಳಿದ್ದಾರೆ.

ಕೆ. ಮಾಧವನ್‌ ಅವರ ವರದಿಯನ್ನು ಪರಿಶೀಲಿಸಿದ ನಂತರ ಮುತ್ತಯ್ಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.