
ಪ್ರಜಾವಾಣಿ ವಿಶೇಷ
25 ವರ್ಷಗಳ ಹಿಂದೆ ಈ ದಿನ
ನೀರಾವರಿ ಯೋಜನೆ: ಕೇಂದ್ರದ ಒಪ್ಪಿಗೆಗೆ ಯತ್ನ
ಬಳ್ಳಾರಿ, ನ. 26– ರಾಜ್ಯದ ಹತ್ತು ನೀರಾವರಿ ಯೋಜನೆಗಳಿಗೆ ಕೇಂದ್ರ
ಸರ್ಕಾರದಿಂದ ಅನುಮತಿ ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಭಾರಿ ನೀರಾವರಿ ಸಚಿವ ಎಚ್.ಕೆ. ಪಾಟೀಲ್ ಅವರು, ಇಂದು ಇಲ್ಲಿ ಹೇಳಿದರು.
ತುಂಗಾ ಮೇಲ್ದಂಡೆ, ಮಾರ್ಕಂಡೇಯ, ಹಿಪ್ಪರಗಿ, ವರಾಹಿ, ಸಿಂಗಟಲೂರು ಮುಂತಾದ ಅನೇಕ ಯೋಜನೆಗಳಿಗೆ ಕೇಂದ್ರದಿಂದ ಅನುಮತಿ ಸಿಗಬೇಕಿದೆ. ಕೆಲವಕ್ಕೆ ಅರಣ್ಯ, ಕೆಲವಕ್ಕೆ ಪರಿಸರ ವಿಚಾರದಲ್ಲಿ ಅನುಮತಿ ದೊರೆಯಬೇಕಿದೆ ಎಂದರು.
ದಸಂಸ ಕಾರ್ಯಕರ್ತನ ಹತ್ಯೆ
ಬೆಂಗಳೂರು, ನ. 26– ಹೊಸಕೋಟೆ ತಾಲ್ಲೂಕಿನ ಚೆನ್ನಾಪುರದಲ್ಲಿ ಹಾಡುಹಗಲೇ ಕಾಂಗ್ರೆಸ್ ಕಾರ್ಯಕರ್ತ ಹಾಗೂ ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಮುನಿಸ್ವಾಮಿ (50) ಎಂಬುವರನ್ನು ರಾಜಕೀಯ ವೈಷಮ್ಯ
ದಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.