ADVERTISEMENT

25 ವರ್ಷಗಳ ಹಿಂದೆ ಈ ದಿನ: ಜಪಾನ್‌ ಪ್ರಧಾನಿಗೆ ‘ಸಿಲಿಕಾನ್‌ ಸಿಟಿ’ ಸ್ವಾಗತ

ಪ್ರಜಾವಾಣಿ ವಿಶೇಷ
Published 21 ಆಗಸ್ಟ್ 2025, 23:49 IST
Last Updated 21 ಆಗಸ್ಟ್ 2025, 23:49 IST
<div class="paragraphs"><p>25 ವರ್ಷಗಳ ಹಿಂದೆ&nbsp;ಈ ದಿನ</p></div>

25 ವರ್ಷಗಳ ಹಿಂದೆ ಈ ದಿನ

   

ಜಪಾನ್‌ ಪ್ರಧಾನಿಗೆ ‘ಸಿಲಿಕಾನ್‌ ಸಿಟಿ’ ಸ್ವಾಗತ

ಬೆಂಗಳೂರು, ಆಗಸ್ಟ್‌ 21– ಎರಡು ದಿನಗಳ ಅಧಿಕೃತ ಭೇಟಿಗಾಗಿ ಇಂದು ರಾತ್ರಿ ನಗರಕ್ಕೆ ಆಗಮಿಸಿದ ಜಪಾನ್‌ ಪ್ರಧಾನಿ ಯೊಶಿರೊ ಮೋರಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ADVERTISEMENT

ಪಾಕಿಸ್ತಾನದಿಂದ ನೇರವಾಗಿ ನಗರದ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೊಶಿರೊ ಅವರನ್ನು, ರಾಜ್ಯಪಾಲರಾದ ವಿ.ಎಸ್‌. ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಕೆಂಪುಹಾಸಿನ ಹಾರ್ದಿಕ ಸ್ವಾಗತ ನೀಡಿದರು.

ಎಕ್ಸ್‌ಪ್ರೆಸ್‌ ಹೆದ್ದಾರಿ: ಇನ್ನು ಸಾರ್ವಜನಿಕ ಅಹವಾಲು ಇಲ್ಲ

ಬೆಂಗಳೂರು, ಆಗಸ್ಟ್‌ 21– ‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ ಕಾರಿಡಾರ್‌ ಯೋಜನೆಗೆ ಸಂಬಂಧಿಸಿ ಸಾರ್ವಜನಿಕ ಅಹವಾಲು ಈಗಾಗಲೇ ಮುಗಿದಿದೆ. ಇನ್ನೇನಿದ್ದರೂ ಯೋಜನೆಯನ್ನು ಶೀಘ್ರವಾಗಿ ಜಾರಿಗೊಳಿಸುವುದಕ್ಕೆ ಆದ್ಯತೆ’ ಎಂದು ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.