ADVERTISEMENT

25 ವರ್ಷಗಳ ಹಿಂದೆ | ಪೇಟೆಂಟ್ ಶಾಸನ: ಕಾನೂನು ಆಯೋಗದ ಶಿಫಾರಸು ನಿಗೂಢ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2024, 0:10 IST
Last Updated 13 ಮಾರ್ಚ್ 2024, 0:10 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ನವದೆಹಲಿ, ಪೇಟೆಂಟ್ ಮಸೂದೆ ಬಗ್ಗೆ ಕಾನೂನು ಆಯೋಗವು ಮಾಡಿರುವ ಶಿಫಾರಸು ಏನೆಂದು ಸದನದ ಗಮನಕ್ಕೆ ತರದೇ ಹೋದುದನ್ನು ಪ್ರತಿಭಟಿಸಿ ಲೋಕಸಭೆಯಲ್ಲಿ ಇಂದು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು. 

ಕಾನೂನು ಆಯೋಗವು ತನ್ನ ವರದಿಯಲ್ಲಿ ಪೇಟೆಂಟ್ ಮಸೂದೆಗೆ ಕೆಲವು ತಿದ್ದುಪಡಿ
ಗಳನ್ನು ಸಲಹೆ ಮಾಡಿದ್ದರೂ, ಅದನ್ನು ಲೋಕಸಭೆಯ ಗಮನಕ್ಕೆ ತರದೆ ಪೇಟೆಂಟ್ ಮಸೂದೆಗೆ ಒಪ್ಪಿಗೆ ಪಡೆಯುವ ಮೂಲಕ ಸರ್ಕಾರ ಈ ಸದನಕ್ಕೆ ಅಗೌರವ ಸೂಚಿಸಿದೆ ಎಂದು ಕಾಂಗ್ರೆಸ್, ಸಿಪಿಐ (ಎಂ), ಸಿಪಿಐ, ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಮತ್ತು ಜನತಾದಳದ ಸದಸ್ಯರು ತೀವ್ರವಾಗಿ ಆಕ್ಷೇಪಿಸಿದರು. 

ಶೂನ್ಯ ವೇಳೆಯಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಈ ವಿಷಯವನ್ನು ಪ್ರಸ್ತಾಪಿಸಿದಾಗ, ಆಳುವ ಬಿಜೆಪಿಯ ಮಿತ್ರಪಕ್ಷವಾದ ಸಮತಾ ಪಕ್ಷ ಸೇರಿದಂತೆ ಪ್ರತಿಪಕ್ಷಗಳು ಸರ್ಕಾರದ ಕ್ರಮವನ್ನು ಟೀಕಿಸಿದವು. 

ADVERTISEMENT

ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿಗೆ ಸ್ಥಳಾಂತರ

ನವದೆಹಲಿ, ಬೆಂಗಳೂರಿನಲ್ಲಿ ಆರಂಭಿಸಲಾಗಿರುವ ನೈರುತ್ಯ ರೈಲ್ವೆ ವಲಯ ಕೇಂದ್ರ ಸ್ಥಾನವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.