25 ವರ್ಷದ ಹಿಂದೆ
ಪಕ್ಷ ಬಲಪಡಿಸಲು ಪಟೇಲ್–ಹೆಗಡೆ ಮಾತುಕತೆ
ಬೆಂಗಳೂರು, ಜುಲೈ 24– ಜನತಾದಳ ಇಬ್ಭಾಗವಾದ ನಂತರ ಯಾವುದೇ ಬಣದ ಜತೆಗೂ ಗುರುತಿಸಿಕೊಳ್ಳದೇ ತಟಸ್ಥರಾಗಿ ಉಳಿದುಕೊಂಡಿರುವ ಕೆಲವು ಮಾಜಿ ಶಾಸಕರು ಮತ್ತು ಸಚಿವರನ್ನು ಸೆಳೆದುಕೊಂಡು ಕಾರ್ಯತಂತ್ರ ರೂಪಿಸುವ ಕುರಿತು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಲೋಕಶಕ್ತಿಯ ಮುಖಂಡ ರಾಮಕೃಷ್ಣ ಹೆಗಡೆ ಅವರ ಜತೆ ಚರ್ಚೆ ನಡೆಸಿದರು.
ಹೆಗಡೆ ಅವರ ನಿವಾಸದಲ್ಲಿ ಇಂದು ಬೆಳಿಗ್ಗೆ ನಡೆದ ಇವರಿಬ್ಬರ ಭೇಟಿಯಲ್ಲಿ ನಗರದಲ್ಲಿರುವ ದಳ ಕಚೇರಿಯನ್ನು ಮತ್ತು ದಳದ ಚಿಹ್ನೆಯನ್ನು ಉಳಿಸಿಕೊಳ್ಳುವ ಕಾರ್ಯತಂತ್ರದ ಕುರಿತು ಚರ್ಚಿಸಲಾಯಿತು.
ಅರಸೀಕೆರೆಯಲ್ಲಿ ಮೂರು ಮನೆಗಳ ದರೋಡೆ
ಅರಸೀಕೆರೆ, ಜುಲೈ 24– ನಾಲ್ವರು ದರೋಡೆಕೋರರ ತಂಡವೊಂದು ಪಟ್ಟಣದ ಹೊರವಲಯದಲ್ಲಿರುವ ಮೂರು ಮನೆಗಳಿಗೆ ನುಗ್ಗಿ, ಮನೆಯವರನ್ನು ಥಳಿಸಿ, ಸುಮಾರು ಎರಡು ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ನಗ–ನಾಣ್ಯಗಳನ್ನು ದೋಚಿಕೊಂಡು ಪರಾರಿಯಾಗಿರುವ ಘಟನೆ ಸಂಭವಿಸಿದೆ.
ಮೂರು ಮನೆಗಳಲ್ಲಿದ್ದ ಮಹಿಳೆಯರು ಧರಿಸಿದ್ದ ಆಭರಣಗಳು, ತಿಜೋರಿಯಲ್ಲಿದ್ದ ಆಭರಣಗಳು ಹಾಗೂ ನಗದು ದೋಚಿಕೊಂಡ ದರೋಡೆಕೋರರು ಮನೆಯಿಂದ ಹೊರಡುವ ಮುನ್ನ ಮನೆಯಲ್ಲಿದ್ದವರನ್ನು ಕೊಠಡಿ ಒಂದರಲ್ಲಿ ಕೂಡಿಹಾಕಿ, ಹೊರಗಿನಿಂದ ಚಿಲಕ ಹಾಕಿಕೊಂಡು ಪರಾರಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.