ಸರಣಿ ಚರ್ಚ್ ಸ್ಫೋಟ: ವಾಯು ಸೇನಾಧಿಕಾರಿ ಸೆರೆ
ಬೆಂಗಳೂರು, ಆಗಸ್ಟ್ 17– ಕರ್ನಾಟಕ, ಆಂಧ್ರಪ್ರದೇಶ ಮತ್ತು ಗೋವಾ ರಾಜ್ಯಗಳಲ್ಲಿನ ಚರ್ಚ್‌ಗಳಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಶಾಮೀಲಾಗಿ, ದೇಶದ ಸೂಕ್ಷ್ಮ ರಕ್ಷಣಾ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸಿದ ಆರೋಪದ ಮೇಲೆ ದೆಹಲಿಯಲ್ಲಿ ಸೇವೆಯಲ್ಲಿರುವ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ರಾಜ್ಯ ಸಿಓಡಿ ಪೊಲೀಸರು ಬಂಧಿಸುವ ಮೂಲಕ ಈ ಘಟನೆಗಳ ಹಿಂದಿನ ಸಂಚು ಮತ್ತಷ್ಟು ಬೆಳಕಿಗೆ ಬಂದಿದೆ.
ಭಾರತೀಯ ವಾಯುಪಡೆಯ ಜ್ಯೂನಿಯರ್ ವಾರಂಟ್ ಅಧಿಕಾರಿ, ಐವತ್ತು ವರ್ಷದ ಸೈಯದ್ ಹಸ್ನು ಜಮಾ, ಬಾಂಬ್ ಸ್ಫೋಟಕ್ಕೆ ಕಾರಣವಾದ ಹೈದರಾಬಾದ್‌ನಲ್ಲಿ ಕೇಂದ್ರ ಆಶ್ರಮವನ್ನು ಹೊಂದಿರುವ ದೀನ್‌ದಾರ್ ಅಂಜುಮಾನ್ ಚನ್ನಬಸವೇಶ್ವರ ಸಿದ್ದಿಕಿ ಧಾರ್ಮಿಕ ಸಂಘಟನೆಯ ಸದಸ್ಯನಾಗಿ ಹಲವು ಸಭೆಗಳಲ್ಲಿ ಭಾಗವಹಿಸಿದ್ದ.
ಬೈವಾಟರ್ ಜತೆ ಜಲಮಂಡಳಿ ಮರುಸಂಧಾನ
ಬೆಂಗಳೂರು, ಆಗಸ್ಟ್ 17– ಬೆಂಗಳೂರು ನಗರಕ್ಕೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ವಿವಾದಾತ್ಮಕ ಯೋಜನೆಯಾದ ಮಲೇಶಿಯಾ ಮೂಲದ ಬೈವಾಟರ್ ಸಂಸ್ಥೆ ಜೊತೆ ಮಾಡಿಕೊಂಡಿರುವ ದರ ಒಪ್ಪಂದದ ಬಗ್ಗೆ ಮರುಸಂಧಾನ ನಡೆಸುವಂತೆ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಗೆ ಸಚಿವ ಸಂಪುಟ ಆದೇಶ ನೀಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.