25 ವರ್ಷಗಳ ಹಿಂದೆ..
ದಳ (ಎಸ್) ಆತ್ಮಾವಲೋಕನ ಸಮಾವೇಶ
ಬೆಂಗಳೂರು, ಅ. 23– ‘ರಾಜ್ಯದಲ್ಲಿ ಮತೀಯ ಶಕ್ತಿಗಳ ಕೈಗೆ ಅಧಿಕಾರ ನೀಡಬಾರದು ಎಂಬುದರ ಜತೆಗೆ ಪಕ್ಷ ವಿಭಜನೆಯಿಂದ ತಮಗೆ ಪಾಠ ಕಲಿಸಲು ಮತದಾರರಿಗೆ ಇಷ್ಟವಿಲ್ಲದೇ ಇದ್ದರೂ, ಅನಿವಾರ್ಯವಾಗಿ ಕಾಂಗ್ರೆಸ್ ಪರ್ಯಾಯ ಎಂಬ ಭಾವನೆಯಿಂದ ಅವರ ಕಡೆಗೆ ಹೆಚ್ಚಿನ ಒಲವು ತೋರಿಸಿದ್ದಾರೆ’ ಎಂದು ರಾಜ್ಯ ಜನತಾದಳ (ಎಸ್) ಅಧ್ಯಕ್ಷರಾದ ಸಿದ್ದರಾಮಯ್ಯ ಅವರು ಇಂದು ಇಲ್ಲಿ ವಿಶ್ಲೇಷಿಸಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲು ಅನುಭವಿಸಿರುವ ಹಿನ್ನಲೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಪಕ್ಷವು ಇಂದಿನಿಂದ ಎರಡು ದಿನಗಳ ಕಾಲ ಏರ್ಪಡಿಸಿರುವ ಸಮಾವೇಶದ ಅಧ್ಯಕ್ಷತೆ ವಹಿಸಿ
ಮಾತನಾಡುತ್ತಿದ್ದರು.
ಖರ್ಗೆ ಅಧಿಕಾರ ಮೊಟಕು
ಬೆಂಗಳೂರು, ಅ. 23– ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೆಲವು ಸಚಿವರ ಖಾತೆಗಳ ಮರು ಹಂಚಿಕೆ ಮಾಡುವುದರ ಜತೆಗೆ ಹಿರಿಯ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಅಧಿಕಾರವನ್ನು ಮೊಟಕು ಮಾಡಿದ್ದಾರೆ.
ಮುಖ್ಯಮಂತ್ರಿಗಳು ಖಾತೆಗಳ ಮರು ಹಂಚಿಕೆ ಮಾಡಿ ರಾಜ್ಯಪಾಲರ ಅಂಗೀಕಾರಕ್ಕಾಗಿ ಅವರಿಗೆ ಕಳಿಸಲಾಗಿದೆ ಎಂದು ವಿಶ್ವಸನೀಯವಾಗಿ ತಿಳಿದುಬಂದಿದೆ.
ಮರು ಹಂಚಿಕೆ ಪ್ರಕಾರ ಖರ್ಗೆ ಅವರಿಗೆ ವಹಿಸಲಾಗಿರುವ ಗೃಹ ಖಾತೆಯಲ್ಲಿದ್ದ ಗುಪ್ತಚರ ದಳ ವಿಭಾಗವನ್ನು ಮುಖ್ಯಮಂತ್ರಿಗಳು ತಾವೇ ಇಟ್ಟುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.