ADVERTISEMENT

25 ವರ್ಷಗಳ ಹಿಂದೆ | ಮಂಗಳವಾರ, 5-8-1997

ಪ್ರಜಾವಾಣಿ ವಿಶೇಷ
Published 4 ಆಗಸ್ಟ್ 2022, 21:15 IST
Last Updated 4 ಆಗಸ್ಟ್ 2022, 21:15 IST
   

‘ಕೇಸರಿ ಆಸ್ತಿಯ ಸಿಬಿಐ ತನಿಖೆ ದೋಷಯುಕ್ತ’

ನವದೆಹಲಿ, ಅ.4 (ಪಿಟಿಐ)– ಕಾಂಗ್ರೆಸ್‌ ಅಧ್ಯಕ್ಷ ಸೀತಾರಾಂ ಕೇಸರಿ ಅವರು ತಮ್ಮ ಆದಾಯ ಮೂಲಗಳಿಗಿಂತಲೂ ಹೆಚ್ಚಿಗೆ ಆಸ್ತಿಗಳನ್ನು ಹೊಂದಿರುವ ಬಗ್ಗೆ ಸಿಬಿಐ ನಡೆಸಿದ ತನಿಖೆಯಲ್ಲಿ ಸಾಕಷ್ಟು ಲೋಪದೋಷಗಳಿವೆ ಎಂದು ಇಂದು ಹೇಳಿರುವ ದೆಹಲಿ ಹೈಕೋರ್ಟ್‌, ಮೂರು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಸಿಬಿಐನಿಂದ ಸ್ಪಷ್ಟನೆ ಕೇಳಿದೆ.

ಕೇಸರಿ ಅವರ ಆಸ್ತಿ ಪ್ರಕರಣದ ಬಗ್ಗೆ ತನಿಖೆ ಮಾಡಿ ನೀಡಲಾಗಿರುವ ವರದಿಯಲ್ಲಿ ಸಿಬಿಐ ಅವರನ್ನು ಆರೋಪ ಮುಕ್ತರನ್ನಾಗಿಸಿದೆ. ಆದರೆ, ನ್ಯಾಯಮೂರ್ತಿ ಜಸ್ಪಾಲ್‌ಸಿಂಗ್ ಹಾಗೂ ನ್ಯಾಯಮೂರ್ತಿ ಮನಮೋಹನ ಸಿಂಗ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಕೋರ್ಟ್‌ ಕೇಳಿರುವ ಪ್ರಶ್ನೆಗಳಿಗೆ ನಾಲ್ಕು ದಿನಗಳ ಒಳಗೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸಿಬಿಐಗೆ ಆದೇಶಿಸಿದೆ.

ADVERTISEMENT

ರೈಲಿನಲ್ಲಿ ಸ್ಫೋಟ: 19 ಮಂದಿಗೆ ಗಾಯ

ಕೋಲಾರ, ಅ.4– ಇಂದು ಬೆಳಿಗ್ಗೆ ಸುಮಾರು 6.15ರ ಸಮಯದಲ್ಲಿ ಟೇಕಲ್‌ ಹತ್ತಿರ ಮದುರೈ–ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಕ್ರಾಸಿಂಗ್‌ಗಾಗಿ ನಿಂತಿದ್ದಾಗ ಬೋಗಿಯೊಳಗೆ ಸಣ್ಣ ಸ್ಫೋಟವಾಗಿದ್ದು 19 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರನ್ನೂ ಕೆಜಿಎಫ್‌ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಹದಿನೈದು ಬೋಗಿಗಳನ್ನು ಹೊಂದಿದ್ದ ರೈಲಿನಲ್ಲಿ ಹಿಂದಿನಿಂದ ಎರಡನೇ ಬೋಗಿಯಲ್ಲಿ ಸ್ಫೋಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.