
ಪ್ರಜಾವಾಣಿ ವಾರ್ತೆ
ತುಮಕೂರು, ಡಿ. 15– ತುಮಕೂರು ತಾಲ್ಲೂಕು ರ‍್ಯಾಪ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ತಿಮ್ಮಾರೆಡ್ಡಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಕುಖ್ಯಾತ ನಕ್ಸಲೀಯ ನಾಯಕ ಮಂಡ್ಲಿ ಪ್ರಭಾಕರ್ ಆಂಧ್ರಪ್ರದೇಶದ ಪೆನುಗೊಂಡ ತಾಲ್ಲೂಕಿನ ಸೋಮಂದಪಲ್ಲಿಯಲ್ಲಿ ಪೊಲೀಸರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದಾನೆ. ಆರೋಪಿ ಪ್ರಭಾಕರ್, ಸೆ. 21ರಂದು ಗ್ರಾ.ಪಂ. ಅಧ್ಯಕ್ಷ ತಿಮ್ಮಾರೆಡ್ಡಿ ಅವರನ್ನು ಬಸ್ಸಿನಿಂದ ಎಳೆದು, ಮಚ್ಚಿನಿಂದ ಕೊಚ್ಚಿ, ರುಂಡ ತೆಗೆದುಕೊಂಡು ಹೋಗಿದ್ದ.
ಸಿನಿಮಾ ನಟನೆ ಗೀಳಿನ ಅಧಿಕಾರಿಗಳಿಗೆ ಕಡಿವಾಣ
ಬೆಂಗಳೂರು, ಡಿ. 15– ರಾಜ್ಯ ಸರ್ಕಾರದ ಅಧಿಕಾರಿಗಳು ವಾಣಿಜ್ಯ ಚಲನಚಿತ್ರಗಳಲ್ಲಿ ನಟಿಸುವುದಾಗಲಿ ಅಥವಾ ಅವುಗಳ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದಾಗಲಿ ಮಾಡುವಂತಿಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಬಿ.ಕೆ. ಭಟ್ಟಾಚಾರ್ಯ ಇಂದು ಇಲ್ಲಿ ಆದೇಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.