ADVERTISEMENT

ಶನಿವಾರ, 15–10–1994

ಶನಿವಾರ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 16:54 IST
Last Updated 14 ಅಕ್ಟೋಬರ್ 2019, 16:54 IST

ದಸರಾ ವೇಳೆ ದಾವಣಗೆರೆಯಲ್ಲಿ ಗಲಭೆ: 2 ಸಾವು– ಅಶ್ರುವಾಯು

ಬೆಂಗಳೂರು, ಅ. 14– ದಾವಣಗೆರೆ ಯಲ್ಲಿ ಇಂದು ದಸರಾ ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ ಹಿನ್ನೆಲೆಯಲ್ಲಿ ದಿಢೀರನೆ ಭುಗಿಲೆದ್ದ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟು ಆರು ಮಂದಿ ಗಾಯಗೊಂಡರು. ದೊಂಬಿಯಲ್ಲಿ ತೊಡಗಿದ್ದ ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಬಳಸಿ ರಬ್ಬರ್ ಗುಂಡು ಹಾರಿಸಿದರು.

ಉರ್ದು ವಾರ್ತೆ: ತನಿಖೆಗೆ ಆಗ್ರಹ

ADVERTISEMENT

ಬೆಂಗಳೂರು, ಅ. 14– ನಗರದಲ್ಲಿ ಹಿಂಸಾ ಚಾರಕ್ಕೆ ಕಾರಣವಾಗಿರುವ ಬೆಂಗಳೂರು ದೂರದರ್ಶನ ಕೇಂದ್ರದ ಉರ್ದು ವಾರ್ತಾ ಪ್ರಸಾರ ಹಿನ್ನೆಲೆಯ ಸತ್ಯಾಸತ್ಯತೆ ಅರಿಯಲು ನ್ಯಾಯಾಂಗ ವಿಚಾರಣೆ ನಡೆಸುವಂತೆ ಪ್ರದೇಶ ಜನತಾ ದಳದ ಉನ್ನತ ನಾಯಕರನ್ನೊಳಗೊಂಡ ನಿಯೋಗವು ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರನ್ನು ಇಂದು ಆಗ್ರಹಪಡಿಸಿದೆ.

ಭಾರತಕ್ಕೆ ಕಬಡ್ಡಿ ಚಿನ್ನ

ಹಿರೋಶಿಮಾ, ಅ. 14– ಭಾರತಕ್ಕೆ ಇಂದು ಸಂತಸದ ದಿನ. ಹನ್ನೆರಡನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಕಬಡ್ಡಿ ಆಟಗಾರರು ಚಿನ್ನದ ಪದಕವನ್ನು ಉಳಿಸಿಕೊಂಡಿದ್ದಾರೆ. ವೇಗದ ಓಟಗಾರ್ತಿ ಕೆ. ಸಾರಮ್ಮ 400 ಮೀಟರ್ಸ್ ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಜೂಡೋದಲ್ಲಿ ಕೂಡಾ ಜಪಾನ್, ಚೀನಾ, ಕೊರಿಯಾಗಳ ತೀವ್ರ ಪೈಪೋಟಿಯ ನಡುವೆಯೂ ಭಾರತದ ಪೂನಮ್ ಚೋಪ್ರಾ ಮಹಿಳಾ ವಿಭಾಗದ 56 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.