ಸಣ್ಣ ಕೈಗಾರಿಕೆಗಳ ಅಬಕಾರಿ ಶುಲ್ಕ ವಿನಾಯ್ತಿ ಒಂದು ಕೋಟಿಗೆ ಏರಿಕೆ
ನವದೆಹಲಿ, ಆಗಸ್ಟ್ 30 (ಯುಎನ್‌ಐ)–ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದು ಅವುಗಳಿಗೆ ನೀಡಲಾಗುವ ಅಬಕಾರಿ ಶುಲ್ಕ ವಿನಾಯ್ತಿಯ ಮಿತಿಯನ್ನು 50 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗೆ ಏರಿಸಿದರು.
ಬಿಜೆಪಿ ನೇತೃತ್ವದ ಸರ್ಕಾರ ಈ ಕ್ಷೇತ್ರಕ್ಕೆ ನೀಡಲಾಗುವ ಅಬಕಾರಿ ಶುಲ್ಕದಲ್ಲಿ ಮಾಡುತ್ತಿರುವ ಎರಡನೇ ಏರಿಕೆ ಇದಾಗಿದೆ. ಈ ಮೊದಲು 1998ರಲ್ಲಿ ಅದನ್ನು 30 ಲಕ್ಷ ರೂಪಾಯಿಗಳಿಂದ 50 ಲಕ್ಞ ರೂಪಾಯಿಗಳಿಗೆ ಏರಿಸಲಾಗಿತ್ತು ಎಂದು ವಾಜಪೇಯಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.