ವಂಚನೆ ಹಗರಣ: ರಾವ್ ಖುದ್ದು ಹಾಜರಿಗೆ ಕೋರ್ಟ್ ವಿನಾಯಿತಿ
ನವದೆಹಲಿ, ಸೆ. 30(ಪಿಟಿಐ)– ಲಕ್ಕೂಭಾಯ್ ಪಾಠಕ್ ವಂಚನೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಅವರು ಖುದ್ದಾಗಿ ಸಿಬಿಐ ನ್ಯಾಯಾಧೀಶರ ಎದುರು ಹಾಜರಾಗುವುದಕ್ಕೆ ಇಂದು ಸುಪ್ರೀಂ ಕೋರ್ಟ್ ವಿನಾಯಿತಿ ನೀಡಿತು.
ರಾವ್ ಅವರ ಭದ್ರತೆಗೆ ಗಂಭೀರ ಅಪಾಯವಿದೆ ಎಂಬ ಕಾರಣವೊಡ್ಡಿ ಇಂದು ಮುಂಜಾನೆ ದೆಹಲಿ ಪೊಲೀಸ್ ಕಮಿಷನರ್ ನಿಖಿಲ್ ಕುಮಾರ್ ಅವರು ವಿಚಾರಣೆಯ ಸ್ಥಳವನ್ನು ತೀಸ್ ಹಜಾರಿ ಕೋರ್ಟಿನಿಂದ ಇನ್ನೊಂದು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸ
ಬೇಕೆಂದು ಕೋರಿ ಸಲ್ಲಿಸಿದ್ದ ವಿಶೇಷ ಮನವಿಯನ್ನು ಪರಿಶೀಲಿಸಿದ ವಿಭಾಗೀಯ ಪೀಠ, ಮುಂದಿನ ಆದೇಶ ನೀಡುವವರೆಗೆ ಈ ವಿನಾಯಿತಿ ನೀಡಿತು. ಈ ವಿಶೇಷ ಮನವಿಯ ವಿಚಾರಣೆಯನ್ನು ಅ.7ಕ್ಕೆ ಕೋರ್ಟ್ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.