ADVERTISEMENT

25 ವರ್ಷಗಳ ಹಿಂದೆ| ಶುಕ್ರವಾರ, 12–5–1995

​ಪ್ರಜಾವಾಣಿ ವಾರ್ತೆ
Published 11 ಮೇ 2020, 14:49 IST
Last Updated 11 ಮೇ 2020, 14:49 IST

ಚರಾರ್‌–ಎ–ಷರೀಫ್‌ ದರ್ಗಾಕ್ಕೆ ಉಗ್ರಗಾಮಿಗಳಿಂದ ಬೆಂಕಿ

ಶ್ರೀನಗರ, ಮೇ 11 (ಪಿಟಿಐ, ಯುಎನ್‌ಐ)– ಕಾಶ್ಮೀರ ಕಣಿವೆಯ ಚರಾರ್‌–ಎ–ಷರೀಫ್‌ ಪಟ್ಟಣದಲ್ಲಿ ‘ನಂದ ರುಷಿ’ ಎಂದೇ ಹೆಸರಾಗಿದ್ದ ಸೂಫಿ ಸಂತ ಷೇಖ್‌ ನೂರುದ್ದೀನ್‌ ವಾಲಿ ಅವರ 535 ವರ್ಷ ಹಳೆಯ ಪವಿತ್ರ ದರ್ಗಾ ಮತ್ತು ಪಕ್ಕದ ಖನಕ್‌ ಹಾಗೂ ಹಸಿರು
ಮಸೀದಿ ಇಂದು ಬೆಳಗಿನ ಜಾವ ವಿದೇಶಿ ಬಾಡಿಗೆ ಹಂತಕರು ಮತ್ತು ಉಗ್ರಗಾಮಿಗಳು ಹಚ್ಚಿದ ಬೆಂಕಿಯಿಂದ ಪೂರ್ಣ ನಾಶವಾಯಿತು.

ದುಷ್ಕೃತ್ಯ ನಡೆಸಿ ಉಗ್ರಗಾಮಿಗಳು ಪರಾರಿಯಾಗುವುದನ್ನು ತಡೆಯಲು ಭದ್ರತಾ ಪಡೆಗಳು ಪಟ್ಟಣ ಸುತ್ತುವರಿದಿದ್ದು, ನಂತರದ ಭೀಕರ ಗುಂಡಿನ ಚಕಮಕಿಯಲ್ಲಿ 30ಕ್ಕೂ ಹೆಚ್ಚು ಉಗ್ರಗಾಮಿಗಳು ಮತ್ತು ಸುಮಾರು ಏಳು ಸೈನಿಕರು ಸತ್ತಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹೊಸ ನೀತಿ: ಪೂಜಾ ಸ್ಥಳಗಳ ಪಾವಿತ್ರ್ಯ ರಕ್ಷಣೆಗೆ ಹೊಸ ನೀತಿಯೊಂದನ್ನು ರೂಪಿಸುವುದಾಗಿ ಈ ಘಟನೆ ಹಿನ್ನೆಲೆಯಲ್ಲಿ ಪ್ರಧಾನಿ ಪಿ.ವಿ.ನರಸಿಂಹರಾವ್‌ ಘೋಷಿಸಿದ್ದಾರೆ.

ಜಿಲ್ಲಾ ಪಂಚಾಯತ್‌ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ

ಧಾರವಾಡ, ಮೇ 11– ಜಿಲ್ಲಾ ಪಂಚಾಯತ್‌ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಪ್ರಸಕ್ತ ಇರುವುದಕ್ಕಿಂತ ಹೆಚ್ಚಿನ ಅಧಿಕಾರ ಹಾಗೂ ಸವಲತ್ತುಗಳನ್ನು ನೀಡಲು ಸರ್ಕಾರ ಬದ್ಧವಾಗಿದೆ. ಈ ಸಂಬಂಧ ಹಿಂದೆ ರಚಿಸಿರುವ ಪರಿಣತರ ಸಮಿತಿಯ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯತ್‌ರಾಜ್‌ ಸಚಿವ
ಎಂ.ಪಿ. ಪ್ರಕಾಶ್‌ ಇಂದು ಇಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.