ದುಬಾರಿಯಾದ ಸ್ನಾತಕೋತ್ತರ ಮಾಹಿತಿ ತಂತ್ರಜ್ಞಾನ ಶಿಕ್ಷಣ
ಮಂಗಳೂರು, ಸೆಪ್ಟೆಂಬರ್ 12– ವಿಶ್ವವಿದ್ಯಾಲಯಗಳಲ್ಲಿ ಲಭ್ಯವಾಗುವ ಮಾಹಿತಿ ತಂತ್ರಜ್ಞಾನ ಕುರಿತ ಅಧ್ಯಯನ ಸಾಮಾನ್ಯ ಆದಾಯ ವರ್ಗಕ್ಕೆ ಎಟುಕದ ರೀತಿಯಲ್ಲಿ ಶುಲ್ಕ ನಿಗದಿಪಡಿಸಿ ಆದೇಶ ಹೊರಡಿಸುವ ಮೂಲಕ ಸ್ನಾತಕೋತ್ತರ ಶಿಕ್ಷಣ ಎಲ್ಲರಿಗೂ ಸಲ್ಲ ಎಂಬಂಥ ಸ್ಥಿತಿಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ.
ಮಂಗಳೂರು ವಿಶ್ವವಿದ್ಯಾಲಯದ ಎಂಬಿಎ ಮತ್ತು ಕಂಪ್ಯೂಟರ್ ಅನ್ವಯ ಕುರಿತ ಎಂಸಿಎ ಪದವಿಗೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಿಗದಿಪಡಿಸಿದ ಶುಲ್ಕ ಯಾವ ವೃತ್ತಿಶಿಕ್ಷಣ ಕೋರ್ಸ್‌ಗೂ ಕಡಿಮೆ ಇಲ್ಲದಷ್ಟು ದುಬಾರಿಯಾಗಿದೆ.
ಕಪಿಲ್ ರಾಜೀನಾಮೆ
ನವದೆಹಲಿ, ಸೆಪ್ಟೆಂಬರ್ 12– ಕಪಿಲ್‌ದೇವ್ ಅವರು, ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಚೆನ್ನೈನಲ್ಲಿರುವ ಭಾರತ ಸಂಭವನೀಯರ ತಂಡಕ್ಕೆ ತರಬೇತಿ ನೀಡಲು ತೆರಳಬೇಕೆಂದು ಬಿಸಿಸಿಐ ಅಧ್ಯಕ್ಷ ವಿ.ಸಿ. ಮುತ್ತಯ್ಯ, ಕಪಿಲ್‌ದೇವ್‌ಗೆ ಸೂಚನೆ ನೀಡಿದ ಬೆನ್ನಲ್ಲಿಯೇ ಕಪಿಲ್ ತಮ್ಮ ರಾಜೀನಾಮೆ ಪತ್ರವನ್ನು ಮುತ್ತಯ್ಯ ಅವರಿಗೆ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.