ಗೋಪೇಶ್ವರ (ಉತ್ತರ ಪ್ರದೇಶ) ಏ. 2 (ಯುಎನ್‌ಐ, ಪಿಟಿಐ)– ಭೂಕಂಪಕ್ಕೆ ತುತ್ತಾಗಿರುವ ಚಮೋಲಿ ಹಾಗೂ ರುದ್ರ ಪ್ರಯಾಗ್ ಜಿಲ್ಲೆಗಳ ಇನ್ನೂ ಹಲವು ಗ್ರಾಮಗಳಿಗೆ ಪರಿಹಾರ ಸಾಮಗ್ರಿಗಳು ತಲುಪದೇ ಆತಂಕದ ವಾತಾವರಣ ಒಂದೆಡೆ ಸೃಷ್ಟಿಯಾಗಿದ್ದರೆ, ಮತ್ತೊಂದೆಡೆ,
ಕಾಡುಪ್ರಾಣಿಗಳ ಹಾವಳಿ ಹಾಗೂ ಮತ್ತಷ್ಟು ನೈಸರ್ಗಿಕ ವಿಕೋಪಕ್ಕೆ ಗುರಿಯಾಗುವ ಭಯದ ನೆರಳಿನಲ್ಲಿ ಇಲ್ಲಿನ ಜನರು ವಾಸಿಸುತ್ತಿದ್ದಾರೆ.
ಸಿಬ್ಬಂದಿಯ ಕೊರತೆಯೂ ಸೇರಿದಂತೆ ಹಲವು ಕಾರಣಗಳಿಂದ ಪರಿಹಾರ ಕಾರ್ಯ ವಿಳಂಬವಾಗುತ್ತಿದೆ. ಈ ಎರಡು ಜಿಲ್ಲೆಗಳ ದೂರದ ಹಳ್ಳಿಗಳನ್ನು ತಲುಪಲು ಸಾಧ್ಯವಾಗದೇ ಪರಿಹಾರ ಕಾರ್ಯಕ್ಕೆ ಅಡಚಣೆ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.