ಜೋಧ್‌ಪುರ, ಅ. 8– ಮಗಳನ್ನು ಚುಡಾಯಿಸಿದ್ದನ್ನು ಪ್ರತಿಭಟಿಸಿದ ದಲಿತ ಮಹಿಳೆಯನ್ನು ಹತ್ಯೆ ಮಾಡಿದ ಘಟನೆ ಭಾಗಮಾಲಪುರ ಗ್ರಾಮದಲ್ಲಿ ನಿನ್ನೆ ರಾತ್ರಿ ನಡೆದಿದೆ. ದುಷ್ಕರ್ಮಿಗಳು ಆಕೆಯ ಮನೆಗೂ ಬೆಂಕಿ ಹಚ್ಚಿದರು. 6 ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಪತ್ತೆ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದರು.
ಶ್ರೀನಗರ, ಅ. 8– ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಮಾತುಕತೆಗಳು ಪುನರಾರಂಭಗೊಳ್ಳುವ ಸಾಧ್ಯತೆ ಇದೆ ಎಂಬ ಇಂಗಿತವನ್ನು ಹಿರಿಯ ಹುರಿಯತ್ ನಾಯಕ ಅಬ್ದುಲ್ ಗನಿ ಲೋನೆ ಅವರು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಹಿಜಬುಲ್ ಮುಜಾಹಿದ್ದೀನ್ ನಡುವಿನ ಮಾತುಕತೆ ಸ್ಥಗಿತ ಪ್ರಸ್ತಾಪಿಸಿದ ಅವರು, ಬಲ ಪಂಥೀಯ ಬಿಜೆಪಿ ಉಗ್ರವಾದಿ ಸಂಘಟನೆಯೊಂದಿಗೆ ಮಾತುಕತೆಗೆ ಸಿದ್ಧವಾಗಿದ್ದೇ ಅತ್ಯಂತ ಪ್ರಮುಖ ಬೆಳವಣಿಗೆ. ಇದರಿಂದ ಶೀಘ್ರವೇ ಮಾತುಕತೆ ಶುರುವಾಗುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.