ADVERTISEMENT

25 ವರ್ಷಗಳ ಹಿಂದೆ: ಶನಿವಾರ, 30–8–1997

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:30 IST
Last Updated 29 ಆಗಸ್ಟ್ 2022, 19:30 IST
   

70 ಪೆಟ್ರೋಲ್ ಬಂಕ್ ಏಜೆನ್ಸಿಗಳ ರದ್ದು

ನವದೆಹಲಿ, ಆ. 29 (ಪಿಟಿಐ)– ಕ್ಯಾಪ್ಟನ್ ಸತೀಶ್ ಶರ್ಮಾ ಅವರು ಕೇಂದ್ರದ ಪೆಟ್ರೋಲಿಯಂ ಸಚಿವರಾಗಿದ್ದಾಗ ವಿವೇಚನಾ ಕೋಟಾದ ಅಡಿಯಲ್ಲಿ ವಿತರಿಸಿದ 70 ಪೆಟ್ರೋಲ್ ಪಂಪ್, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ಏಜೆನ್ಸಿಗಳನ್ನು ದೆಹಲಿ ಹೈಕೋರ್ಟ್ ಇಂದು ರದ್ದುಪಡಿಸಿತು.

ಇದರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಸೊಸೆ ಟಿ.ಎಸ್. ಅನಿತಾ, ಕಾನೂನು ಕಾರ್ಯದರ್ಶಿ ವಿ.ಕೆ. ಅಗರವಾಲ್ ಅವರ ಪತ್ನಿ ಉಷಾ ಅವರಿಗೆ ನೀಡಿದ ಏಜೆನ್ಸಿಗಳೂ ಸೇರಿವೆ.

ADVERTISEMENT

‘ದೇವೇಗೌಡರ ಸೊಸೆ ಎಂಬ ಕಾರಣ ಕ್ಕಾಗಿಯೇ ಅನಿತಾ ಅವರಿಗೆ ಪೆಟ್ರೋಲ್ ಬಂಕ್ ಮಂಜೂರು ಮಾಡಲಾಗಿದೆ. ಅವರು ನಿರುದ್ಯೋಗಿ ಎಂಜಿನಿಯರ್ ಎಂಬ ಕಾರಣಕ್ಕೆ ನೀಡಿಲ್ಲ’ ಎಂದು ಹೈಕೋರ್ಟ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.