ADVERTISEMENT

25 ವರ್ಷಗಳ ಹಿಂದೆ: ಅಗ್ನಿ–2 ಮಧ್ಯಂತರಗಾಮಿ ಕ್ಷಿಪಣಿ ಉಡಾವಣೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
   

ಅಗ್ನಿ–2 ಮಧ್ಯಂತರಗಾಮಿ ಕ್ಷಿಪಣಿ ಉಡಾವಣೆ

ನವದೆಹಲಿ, ಏ. 11 (ಯುಎನ್‌ಐ, ಪಿಟಿಐ)– ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಸಾಧನಗಳ ಪರೀಕ್ಷೆ ನಡೆಸಿದ ನಂತರ ಭಾರತ ಇಂದು ಒರಿಸ್ಸಾದ ಬಾಲಸ್ಸೋರಿ ಜಿಲ್ಲೆಯ ಇನ್ನರ್‌ವೀಲರ್ ದ್ವೀಪದಲ್ಲಿ ಅತ್ಯಾಧುನಿಕ ಅಗ್ನಿ–2 ದೇಶಾಂತರಗಾಮಿ ಕ್ಷಿಪಣಿಯ ‍ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿ ‘ವಿಶೇಷರ ಸಾಲಿಗೆ’ ಸೇರಿತು.

ರಾತ್ರಿ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು, ದೇಶದ ಈ ಸಾಧನೆಯ ವಿಷಯವನ್ನು ಪ್ರಕಟಿಸಿ, ದೇಶದ ಸಾಮರ್ಥ್ಯ ಹಾಗೂ ರಕ್ಷಣೆಗಾಗಿ ಈ ಪ್ರಯೋಗ ಮಾಡಲಾಗಿದೆ ಎಂದರು. ಅದಕ್ಕಾಗಿ ವಿಜ್ಞಾನಿಗಳನ್ನು ಅವರು ಅಭಿನಂದಿಸಿದರು.

ADVERTISEMENT

ಹುಬ್ಬಳ್ಳಿ: ಶಾಂತ ಸ್ಥಿತಿ ಬಸ್ ಸಂಚಾರ ಆರಂಭ

ಹುಬ್ಬಳ್ಳಿ, ಏ. 11– ಹೈಕೋರ್ಟ್ ಪೀಠ ಸ್ಥಾಪನೆಗಾಗಿ ನಡೆಯುತ್ತಿರುವ ಚಳವಳಿಯ ಸಂದರ್ಭದಲ್ಲಿ ಉಂಟಾದ ಹಿಂಸಾಚಾರದಿಂದ ತತ್ತರಿಸಿದ್ದ ಅವಳಿ ನಗರದಲ್ಲಿ ಜನಜೀವನ ಇಂದು ಮಾಮೂಲಿಗೆ ಹಿಂದಿರುಗಿತು.

ಬಸ್ಸುಗಳ ಮೇಲೆ ನಡೆದ ನಿರಂತರ ದಾಳಿ ಪ್ರತಿಭಟಿಸಿ ಶುಕ್ರವಾರ ಪ್ರತಿಮುಷ್ಕರ ಆರಂಭಿಸಿದ್ದ ಸಾರಿಗೆ ಸಂಸ್ಥೆ ಸಿಬ್ಬಂದಿ ಕೂಡಾ ತಮ್ಮ ಮುಷ್ಕರ ಹಿಂತೆಗೆದುಕೊಂಡಿದ್ದು, ಅವಳಿ ನಗರದಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳು ಎಂದಿನಂತೆ ಸಂಚರಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.