ಬೆಂಗಳೂರು, ಜೂನ್ 2– ರಾಜ್ಯದ ಹದಿನಾರು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳಿಗೆ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕೆಲವು ಕಡೆ
ಘರ್ಷಣೆಗಳು ನಡೆದಿದ್ದನ್ನು ಹೊರತುಪಡಿಸಿ ಬಹುತೇಕ ಶಾಂತಿಯುತವಾಗಿತ್ತು. ಒಟ್ಟು 2,308 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶೇಕಡ 61ರಷ್ಟು ಮತದಾನ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನಲ್ಲಿ ವ್ಯಾಪಕ ಚುನಾವಣಾ ಹಿಂಸಾಚಾರ ಮತ್ತು ಅಕ್ರಮಗಳು ನಡೆದಿವೆ. ತಾಲ್ಲೂಕಿನಲ್ಲಿ ವ್ಯಕ್ತಿಯೊಬ್ಬ ಇರಿತಕ್ಕೆ ಒಳಗಾಗಿ ಸತ್ತಿದ್ದು, ಪೊಲೀಸ್ ಮೂಲಗಳು ‘ಇದು ಚುನಾವಣಾ ಹಿಂಸೆ ಪ್ರಕರಣವಲ್ಲ’ ಎಂದಿವೆ. ಆದರೆ ಸತ್ತ ವ್ಯಕ್ತಿ ಜನತಾ ದಳ ಬೆಂಬಲಿಗ ಎನ್ನಲಾಗಿದ್ದು, ಪ್ರಕರಣ ನಿಗೂಢವಾಗಿದೆ.
ಕೋಲಾರ, ಚಿಕ್ಕಮಗಳೂರು, ರಾಯಚೂರು, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದೆರಡು ಮತಗಟ್ಟೆಗಳಲ್ಲಿ ವಿಭಿನ್ನ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆ ಹಾಗೂ ನಕಲಿ ಮತದಾನಕ್ಕೆ ಯತ್ನಿಸಿದ ವರದಿಗಳು ಬಂದಿವೆ.
ಸಿಬಿಐನಿಂದ ಕ್ರಿಕೆಟಿಗರ ಬ್ಯಾಂಕ್ ಖಾತೆ ತನಿಖೆ
ನವದೆಹಲಿ, ಜೂನ್ 2– ಕ್ರಿಕೆಟ್ ಮೋಸದಾಟದಲ್ಲಿ ಪಾಲ್ಗೊಂಡಿದ್ದರೆಂಬ ಆಪಾದನೆಗೆ ಒಳಗಾಗಿರುವ ಆಟಗಾರರು ಕಳೆದ ಕೆಲವು ವರ್ಷಗಳಿಂದ ವ್ಯವಹರಿ
ಸುತ್ತಿರುವ ಬ್ಯಾಂಕುಗಳ ಖಾತೆಗಳನ್ನು ಸಿಬಿಐ ತನಿಖೆಗೆ ಒಳಪಡಿಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.