ಹೊಯ್ಸಳರ ನಾಡಿನಲ್ಲಿ ನುಡಿ ಸಮ್ಮೇಳನ
ಹಾಸನ, ಡಿ. 20– ಹೊಯ್ಸಳ ಶಿಲ್ಪಕಲೆಯ ತವರು, ಜಗತ್ತಿನ ವಿಸ್ಮಯಗಳಲ್ಲಿ ಒಂದಾಗಿರುವ ಗೊಮ್ಮಟನ ಆವಾಸ ಸ್ಥಾನದ ಜಿಲ್ಲೆ ಹಾಸನದಲ್ಲಿ ಅಖಿಲ ಭಾರತ 65ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೊನೆ ಗಳಿಗೆಯ ಭಾರೀ ಸಿದ್ಧತೆ ಸಾಗಿದೆ.
ಶನಿವಾರದಿಂದ ನಾಲ್ಕು ದಿನ ಕಾಲ ನಡೆಯುವ ಈ ಸಮ್ಮೇಳನಾಧ್ಯಕ್ಷತೆಯನ್ನು ಸುಮನೋಹರ ಕವಿ ಚೆನ್ನವೀರ ಕಣವಿ ವಹಿಸಲಿದ್ದು, ಪ್ರಧಾನಿ ಎಚ್.ಡಿ. ದೇವೇಗೌಡರು ಉದ್ಘಾಟಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳ ಇತಿಹಾಸದಲ್ಲಿ ನಾಲ್ಕು ದಿನ ಮೇಳ ನಡೆಯುತ್ತಿರುವುದು ಇದೇ ಪ್ರಥಮ ಸಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.