ತ್ರಿಪುರ: ಮಾಣಿಕ್ ಸರ್ಕಾರ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ
ಅಗರ್ತಲಾ, ಮಾರ್ಚ್ 11 (ಯುಎನ್‌ಐ)– ತ್ರಿಪುರದ 9ನೇ ಮುಖ್ಯಮಂತ್ರಿಯಾಗಿ ಎಡರಂಗದ ಮುಖ್ಯ ಅಂಗಪಕ್ಷವಾದ ಸಿಪಿಎಂ ನಾಯಕ ಮಾಣಿಕ್ ಸರ್ಕಾರ್ ಅವರು ಇಂದು ಇಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಸಿದ್ದೇಶ್ವರ ಪ್ರಸಾದ್ ಅವರು, ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಸೇರಿದಂತೆ 16 ಮಂದಿ ಸಚಿವರಿಗೆ ಅಧಿಕಾರದ, ಗೋಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.