ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಭಾನುವಾರ, 19-5-1996

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:30 IST
Last Updated 18 ಮೇ 2021, 19:30 IST
   

27ರಂದೇ ವಿಶ್ವಾಸಮತ ‘ಜನ ಖರೀದಿ’ ಇಲ್ಲ: ಬಿಜೆಪಿ

ನವದೆಹಲಿ, ಮೇ 18– ಈ ತಿಂಗಳ ಇಪ್ಪತ್ತೆರಡರಂದು ಸೇರಲಿರುವ ಹನ್ನೊಂದನೇ ಲೋಕಸಭೆಯ ಪ್ರಾರಂಭಿಕ ಅಧಿವೇಶನದಲ್ಲಿ 27ರಂದೇ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಇತ್ಯರ್ಥವಾಗಲಿದೆ. ಇಂದು ಸಂಜೆ ನಾಲ್ಕು ಗಂಟೆಗೆ ನಡೆದ ಕೇಂದ್ರ ಸಂಪುಟದ ಸಭೆಯು ಈ ಮುಂಚೆ 24ರಿಂದ ಮಾಡಬೇಕೆಂದು ತೀರ್ಮಾನಿಸಿದ್ದ ಅಧಿವೇಶನವನ್ನು 22ರಿಂದಲೇ ಆರಂಭಿಸಲು ನಿರ್ಧರಿಸಿತು.

ಈ ತಿಂಗಳ 31ರೊಳಗೆ ವಿಶ್ವಾಸಮತ ಕೋರಬೇಕೆಂದು ರಾಷ್ಟ್ರಪತಿ ಅವರು ಆಜ್ಞಾಪಿಸಿರುವುದರಿಂದ ಆದಷ್ಟು ಮುಂಚಿತವಾಗಿಯೇ ಪ್ರಧಾನಿ ವಾಜಪೇಯಿ ಅವರು ವಿಶ್ವಾಸಮತ ಕೋರುವುದು ಈಗಿನ ಬದಲಾವಣೆಯ ಉದ್ದೇಶ ಎಂಬುದಾಗಿ ಅಧಿಕೃತ ಮೂಲಗಳು ಹೇಳಿವೆ.

ADVERTISEMENT

ಕಾವೇರಿ: ‘ರಾಜ್ಯದ ನಿಲುವು ಬದಲಿಲ್ಲ’

ಬೆಂಗಳೂರು, ಮೇ 18– ತೃತೀಯ ರಂಗದಲ್ಲಿ ಡಿಎಂಕೆ ನಿರ್ಣಾಯಕ ಪಾತ್ರ ವಹಿಸಿದ ಮಾತ್ರಕ್ಕೆ ರಾಜ್ಯ ಸರ್ಕಾರ ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ತಳೆದಿರುವ ನಿಲುವಿನಲ್ಲಿ ಯಾವುದೇ ರೀತಿಯ ಬದಲಾವಣೆಯೂ ಆಗುವುದಿಲ್ಲ ಎಂದು ತೃತೀಯ ರಂಗದ ನಾಯಕ ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಇಂದು ಇಲ್ಲಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.