ADVERTISEMENT

50 ವರ್ಷಗಳ ಹಿಂದೆ: ಸೋಮವಾರ 28.6.1971

​ಪ್ರಜಾವಾಣಿ ವಾರ್ತೆ
Published 27 ಜೂನ್ 2021, 19:31 IST
Last Updated 27 ಜೂನ್ 2021, 19:31 IST
   

ರಾಜಸ್ಥಾನ ಮುಖ್ಯಮಂತ್ರಿ ಸುಖಾಡಿಯಾ ರಾಜೀನಾಮೆ

ಜಯಪುರ, ಜೂನ್ 27– ರಾಜಸ್ಥಾನ ಮುಖ್ಯಮಂತ್ರಿ ಸ್ಥಾನ ತ್ಯಜಿಸುವುದಾಗಿ ಶ್ರೀ ಮೋಹನ್‌ ಲಾಲ್ ಸುಖಾಡಿಯಾ ಅವರು ಆಡಳಿತ ಕಾಂಗ್ರೆಸ್ ಶಾಸಕರ ಜಂಟಿ ಸಭೆಯಲ್ಲಿ ಇಂದು ಪ್ರಕಟಿಸಿದರು.

1954ನೇ ನವೆಂಬರ್ ತಿಂಗಳಲ್ಲಿ ತಮ್ಮ 37ನೇ ವಯಸ್ಸಿನಲ್ಲಿ ರಾಜಸ್ಥಾನದ ಮುಖ್ಯಮಂತ್ರಿಯಾದ ಶ್ರೀ ಸುಖಾಡಿಯಾ ಅವರು, ರಾಷ್ಟ್ರಪತಿ ಆಳ್ವಿಕೆಯ ದಿನಗಳನ್ನು ಬಿಟ್ಟರೆ ಉಳಿದ ಕಾಲದಲ್ಲೆಲ್ಲಾ ಅಧಿಕಾರದಲ್ಲಿದ್ದರು. ಅಧಿಕಾರ ತ್ಯಜಿಸಲು ಪ್ರಧಾನಮಂತ್ರಿಯಾಗಲೀ ಅಥವಾ ಇನ್ನು ಯಾರಾದರೂ ಆಗಲಿ ತಮ್ಮನ್ನು ಒತ್ತಾಯಪಡಿಸಲಿಲ್ಲ, ಇದು ತಮ್ಮ ಸ್ವಂತ ನಿರ್ಧಾರವೆಂದು ಶ್ರೀ ಸುಖಾಡಿಯಾ ಅವರು ತಮ್ಮಸಹೋದ್ಯೋಗಿಗಳಿಗೆ ತಿಳಿಸಿದಾಗ ಅವರ ಕಣ್ಣಲ್ಲಿ ಅಶ್ರು ಧಾರಾಕಾರವಾಗಿ ಹರಿಯಿತು.

ADVERTISEMENT

ಇದರಿಂದ ರಾಜಸ್ಥಾನ ಆಡಳಿತ ಕಾಂಗ್ರೆಸ್ಸಿನಲ್ಲಿನ ಬಿಕ್ಕಟ್ಟು ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.