ADVERTISEMENT

50 ವರ್ಷಗಳ ಹಿಂದೆ | ಶುಕ್ರವಾರ, 30–1–1970

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 20:00 IST
Last Updated 29 ಜನವರಿ 2020, 20:00 IST

ವಿವಿಧ ಪ್ರತಿಕ್ರಿಯೆ: ಸಂತಸ, ಸಂಕಟ

ನವದೆಹಲಿ, ಜ. 29– ಚಂಡೀಗಡ ಕುರಿತು ಕೇಂದ್ರದ ನಿರ್ಧಾರ ಸಂಬಂಧಪಟ್ಟ ಎರಡು ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಾಗಳಲ್ಲಿ ಮಿಶ್ರ ಪ್ರತಿಕ್ರಿಯೆಗೆ ಎಡೆಕೊಟ್ಟಿದೆ.

ತಮ್ಮ ರಾಜ್ಯಕ್ಕೆ ಚಂಡೀಗಡ ದೊರಕುವುದಕ್ಕಾಗಿ ಪಂಜಾಬ್ ನಾಯಕರು ಸಂತಸ ವ್ಯಕ್ತಪಡಿಸಿದರಾದರೂ
ಫಜಿಲ್ಕಾ ಅಮೋಹರ್ ಮತ್ತಿತರ ನೂರಕ್ಕೂ ಹೆಚ್ಚು ಹಿಂದಿ ಭಾಷಾ ಗ್ರಾಮಗಳನ್ನು ಹರಿಯಾಣಾಕ್ಕೆ ಕೊಡುವ ಬಗೆಗೆ ಅವರು ನಿರಾಶೆ ವ್ಯಕ್ತಪಡಿಸಿದರು. ‘ಇದು ಚಂಡೀಗಡಕ್ಕಾಗಿ ತೆರುವ ಭಾರಿ ಬೆಲೆ’ ಎಂದು ಒಬ್ಬ ನಾಯಕರು ಹೇಳಿದರು.

ADVERTISEMENT

ಚಂಡೀಗಡ ನಷ್ಟವಾದುದಕ್ಕಾಗಿ ಹರಿಯಾಣ ನಾಯಕರಿಗೆ ನಿರಾಶೆಯಾಗಿದ್ದರೂ ಅದರ ಬದಲು ಬೇರೆ ಪ್ರದೇಶ ನೀಡುವ ಹಾಗೂ ಹೊಸ ರಾಜಧಾನಿ ನಿರ್ಮಾಣಕ್ಕೆ ಕೇಂದ್ರದ ನೆರವು
ಲಭಿಸುವ ಬಗೆಗೆ ಅವರು ಸಂತಸ ಸೂಚಿಸಿದರು.

ಐದು ವರ್ಷದ ಬಳಿಕಪಂಜಾಬಿಗೆ ಚಂಡೀಗಡ

ನವದೆಹಲಿ, ಜ. 29– ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ಮೂರು ವರ್ಷಗಳಿಂದ ಇತ್ಯರ್ಥ
ವಾಗದೆ ಇದ್ದ ಚಂಡೀಗಡ ವಿವಾದಇಂದು ಪರಿಹಾರ ಕಂಡು,ಚಂಡೀಗಡವು ಪಂಜಾಬ್ ರಾಜ್ಯಕ್ಕೆ ದಕ್ಕಿತು.

‌ಇದಕ್ಕೆ ಬದಲಾಗಿ ಹರಿಯಾಣರಾಜ್ಯಕ್ಕೆ ಹೊಸ ರಾಜಧಾನಿ ಕಟ್ಟಿಕೊಳ್ಳಲು 20 ಕೋಟಿ ರೂಪಾಯಿಗಳ ಧನಸಹಾಯ ಹಾಗೂ ಫಜಿಲ್ಕಾ ತೆಹಸಿಲ್‌ನ 114 ಗ್ರಾಮಗಳು ಸಿಕ್ಕಿದವು.

ಕೇಂದ್ರ ಸಂಪುಟದ ಸಭೆಯು ಉಭಯ ರಾಜ್ಯಗಳ ಬೇಡಿಕೆಗಳನ್ನುಬಹು ಎಚ್ಚರಿಕೆಯಿಂದ ಪರಿಶೀಲಿಸಿ, ಪರಿಹಾರ ಸೂತ್ರ ಕುರಿತು ಇಂದುಸುದೀರ್ಘ ಚರ್ಚೆ ನಡೆಸಿದ ಬಳಿಕ,ಸರ್ಕಾರ ಈ ನಿರ್ಧಾರವನ್ನು
ಪ್ರಕಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.