ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 5.5.1972

​ಪ್ರಜಾವಾಣಿ ವಾರ್ತೆ
Published 4 ಮೇ 2022, 19:30 IST
Last Updated 4 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಿಯಾಯಿತಿಗಳಲ್ಲಿ ಭಾರಿ ಖೋತಾ ಸಂಭವ

ನವದೆಹಲಿ, ಮೇ 4 (ಪಿಟಿಐ)– ದೇಶದ ಆದಾಯದಲ್ಲಿರುವ ಕೊರತೆ ಪ್ರಮಾಣವನ್ನು ಕಡಿಮೆ ಮಾಡುವ ಸಲುವಾಗಿ ಅರ್ಹತೆ ಇಲ್ಲದ ಕ್ಷೇತ್ರಗಳು ಅಥವಾ ಸರಕುಗಳಿಂದ ಕನಿಷ್ಠ ಶೇ 50 ರಷ್ಟು ರಿಯಾಯಿತಿಗಳನ್ನು ಖೋತಾ ಮಾಡಲು ಪ್ರಯತ್ನಿಸಲಾಗುವುದು ಎಂದು ತಿಳಿಸಿರುವ ಕೇಂದ್ರದ ಆರ್ಥಿಕ ಸಚಿವ ಪಿ.ಚಿದಂಬರಂ, ರಿಯಾಯಿತಿಗಳನ್ನು ಕುರಿತಂತೆ ಸರ್ಕಾರ ಶೀಘ್ರದಲ್ಲೇ ‘ಶ್ವೇತಪತ್ರ’ ಬಿಡುಗಡೆ ಮಾಡಲಿದೆ ಎಂದರು.

ಸಂಯುಕ್ತ ರಂಗ ಸರ್ಕಾರದಲ್ಲಿ 2ನೇ ಬಾರಿಗೆ ಹಣಕಾಸು ಸಚಿವರಾಗಿ ನೇಮಕವಾದ ನಂತರ, ಸಮ್ಮೇಳನವೊಂದರಲ್ಲಿ ಮಾತನಾಡಿದ ಚಿದಂಬರಂ, ಭಾರತದಲ್ಲಿನ ರಿಯಾಯಿತಿಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗುತ್ತಿರುವ ಶ್ವೇತಪತ್ರ ಮುಕ್ತಾಯದ ಹಂತದಲ್ಲಿದ್ದು, ಲೋಕಸಭಾ ಸದಸ್ಯರಿಗೆ ವಿತರಿಸಲಾಗುವುದು. ಕೆಲವೇ ದಿನಗಳಲ್ಲಿ ಇದರ ಬಿಡುಗಡೆ ಆಗಲಿದ್ದು, ಈ ಬಗ್ಗೆ ರಾಷ್ಟ್ರೀಯ ಚರ್ಚೆಗೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ADVERTISEMENT

ರಾಜ್ಯ ದಳ ಅಧ್ಯಕ್ಷರ ಆಯ್ಕೆಗೆ ಪೂರ್ವಭಾವಿ ಸಭೆ

ಬೆಂಗಳೂರು, ಮೇ 4– ಜನತಾದಳ ರಾಜ್ಯ ಘಟಕದ ಅಧ್ಯಕ್ಷರ ಸರ್ವಾನುಮತದ ಆಯ್ಕೆಗೆ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ 10 ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.