ADVERTISEMENT

50 ವರ್ಷಗಳ ಹಿಂದೆ| ಗುರುವಾರ, 20–5–1970

​ಪ್ರಜಾವಾಣಿ ವಾರ್ತೆ
Published 20 ಮೇ 2020, 22:27 IST
Last Updated 20 ಮೇ 2020, 22:27 IST

ವಿಶ್ವಸಮರ: ಮಾವೊ ಕೂಗು

ಹಾಂಗ್‌ಕಾಂಗ್‌, ಮೇ 20– ಈಗ ವಿಶ್ವಸಮರದ ಅಪಾಯ ತಲೆದೋರಿದೆ ಎಂದು ಚೀನಾದ ಕಮ್ಯುನಿಸ್ಟ್‌ ಪಕ್ಷದ ಅಧ್ಯಕ್ಷ ಮಾವೋತ್ಸೆ ತುಂಗ್‌ ಅವರು ತಿಳಿಸಿರುವುದಾಗಿ ಪೀಕಿಂಗ್‌ ರೇಡಿಯೊ ಇಂದು ವರದಿ ಮಾಡಿತು.

‘ವಿಶ್ವಸಮರದ ಸೂಚನೆ ಇದೆ, ಸಿದ್ಧರಾಗಿ’ ಎಂದು ಮಾವೊ ವಿಶ್ವಕ್ಕೆ ಕರೆ ನೀಡಿದ್ದಾರೆ.

ADVERTISEMENT

ಅಮೆರಿಕದ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡಲು ಚೀನೀಯರು ಕಾಂಬೋಡಿಯಾದ ಪದಚ್ಯುತ ಅಧ್ಯಕ್ಷ ನರೋದಮ್‌ ಸಿಹನೂರ್‌ ಅವರಿಗೆ ಬೆಂಬಲ ನೀಡುವರೆಂದು ಮಾವೊ ತಿಳಿಸಿರುವುದಾಗಿ ಪೀಕಿಂಗ್‌ ರೇಡಿಯೊ ಪ್ರಮುಖ ಪ್ರಕಟಣೆಯಲ್ಲಿ ತಿಳಿಸಿದೆ.

‘ಕಾಂಗ್ರೆಸ್ ಒಡೆಯಲು ಎಸ್ಸೆನ್‌ ಕಾರಣ’

ನವದೆಹಲಿ, ಮೇ 20– ಕಾಂಗ್ರೆಸ್‌ ಇಬ್ಭಾಗವಾಗಲು ವಿರೋಧಿ ಕಾಂಗ್ರೆಸ್‌ ಅಧ್ಯಕ್ಷ ಶ್ರೀ ಎಸ್‌.ನಿಜಲಿಂಗಪ್ಪನವರೇ ಕಾರಣ ಎಂದು ಆಡಳಿತ ಕಾಂಗ್ರೆಸ್‌ ಸಂಸತ್‌ ಪಕ್ಷದ ವಾರ್ಷಿಕ ವರದಿ ಇಂದು ತಿಳಿಸಿದೆ.

ಶ್ರೀ ನಿಜಲಿಂಗಪ್ಪ ಹಾಗೂ ಅವರ ಸಹಚರರ ಮತ್ತು ಪ್ರಧಾನಿ ಹಾಗೂ ಅವರ ಸಹೋದ್ಯೋಗಿಗಳ ನಡುವಣ ಹೋರಾಟವು ಪಾಳೆಗಾರಿಕೆ ಮತ್ತು ಪ್ರಜಾಸತ್ತೆಯ ನಡುವಣ ಸಂಘರ್ಷದ ಸಂಕೇತವಾಗಿದೆ ಎಂದು ಈ ವರದಿ ತಿಳಿಸಿದೆ.

‘ಪಕ್ಷವು ಸವಾಲನ್ನು ಸ್ವೀಕರಿಸಿ ಪ್ರಜಾಸತ್ತೆಯನ್ನೇ ಆರಿಸಿಕೊಂಡಿತಲ್ಲದೆ ಪ್ರಧಾನಿಯ ಬೆಂಬಲಕ್ಕೆ ಬಂದು ನಿಂತಿತು’ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.