ADVERTISEMENT

50 ವರ್ಷಗಳ ಹಿಂದೆ | ಗುರುವಾರ, 9–7–1970

​ಪ್ರಜಾವಾಣಿ ವಾರ್ತೆ
Published 8 ಜುಲೈ 2020, 19:30 IST
Last Updated 8 ಜುಲೈ 2020, 19:30 IST

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆಗಾಗಿ ಪ್ರತ್ಯೇಕ ಕಾರ್ಪೊರೇಷನ್‌

ಬೆಂಗಳೂರು, ಜುಲೈ 8– ರಾಜ್ಯದಲ್ಲಿ ತತ್‌ಕ್ಷಣ ವಿದ್ಯುತ್‌ ಉತ್ಪತ್ತಿ ಯೋಜನೆಗಳನ್ನು ಕೈಗೊಳ್ಳಲು ಮುಖ್ಯಮಂತ್ರಿ ಅಧ್ಯಕ್ಷರಾಗಿರುವ ವಿದ್ಯುತ್‌ ಕಾರ್ಪೊರೇಷನ್‌ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ನಿರ್ಧರಿಸಿತು.

‘ಮೈಸೂರು ವಿದ್ಯುತ್‌ ಕಾರ್ಪೊರೇಷನ್‌’ ಎಂದು ಹೆಸರು ಪಡೆಯುವ ಈ ಮಂಡಳಿ, ಕಾಳಿ ನದಿ ವಿದ್ಯುತ್‌ ಯೋಜನೆಯ ಪ್ರಥಮ ಘಟ್ಟದ ಕಾರ್ಯವನ್ನು ಕೈಗೊಳ್ಳುವುದು.

ADVERTISEMENT

22.5 ಕೋಟಿ ರೂಪಾಯಿ ಖರ್ಚಿನ ಪ್ರಥಮ ಘಟ್ಟದ ಕಾರ್ಯ 71ರಲ್ಲಿ ಆರಂಭವಾಗಿ 73–74ರ ಹೊತ್ತಿಗೆ ಮುಗಿದು, ಎರಡು ಜನರೇಟರುಗಳಿಂದ 3.24 ಮೆಗಾವಾಟ್‌ನಷ್ಟು ವಿದ್ಯುತ್‌
ಉತ್ಪತ್ತಿಯಾಗುವುದು.

ಪ್ರವಾಸೋದ್ಯಮ ಕಾರ್ಪೊರೇಷನ್‌ ರಚನೆಗೆ ನಿರ್ಧಾರ

ಬೆಂಗಳೂರು, ಜುಲೈ 8– ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲು ಕಾರ್ಪೊರೇ ಷನ್‌ ಒಂದನ್ನು ರಚಿಸಲು ಇಂದು ನಡೆದ ಮಂತ್ರಿಮಂಡಲದ ಸಭೆ ತೀರ್ಮಾನಿಸಿತು.

ಆರಂಭದಲ್ಲಿ ಈ ಸಂಸ್ಥೆಯ ಬಂಡವಾಳ 1 ಕೋಟಿ ರೂಪಾಯಿ.

ಕಾರ್ಪೊರೇಷನ್‌ ತನ್ನ ಚಟುವಟಿಕೆಗಳ ಬಗ್ಗೆ ವಿವರಗಳನ್ನು ಸಿದ್ಧಪಡಿಸಿದ ನಂತರ ಹೆಚ್ಚು ಬಂಡವಾಳ ಒದಗಿಸುವ ಪ್ರಶ್ನೆಯನ್ನು ಸರ್ಕಾರ ಪರಿಶೀಲಿಸುವು ದೆಂದು ಮಂತ್ರಿಮಂಡಲದ ನಿರ್ಧಾರವನ್ನು ವರದಿಗಾರರಿಗೆ ತಿಳಿಸಿದ ಕೈಗಾರಿಕೆ ಹಾಗೂ ವಾರ್ತೆ ಸಚಿವ ಶ್ರೀ ಎಂ.ರಾಜಶೇಖರಮೂರ್ತಿ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.