ADVERTISEMENT

50 ವರ್ಷಗಳ ಹಿಂದೆ: ಶನಿವಾರ, 26 ಜೂನ್, 1971

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST
   

ರಾಜಕಾರಣಿಗಳಿಗೆಸಿಮೆಂಟ್ ಸಂಸ್ಥೆ ಹಣ

ನವದೆಹಲಿ, ಜೂನ್ 25– ಸ್ವತಂತ್ರ ಪಕ್ಷದ ನಾಯಕ ಸಿ. ರಾಜಗೋಪಾಲಾಚಾರಿಅವರನ್ನೊಳಗೊಂಡು ಅನೇಕ ಮಂದಿ ರಾಜಕೀಯ ನಾಯಕರುಗಳು 1966ರಲ್ಲಿ ಸಿಮೆಂಟ್ ವಿತರಣೆ ಮತ್ತು ಸಮನ್ವಯ ಸಂಸ್ಥೆಯಿಂದ ಹಣ ಪಡೆದಿದ್ದಾರೆ.

ಸಿ. ರಾಜಗೋಪಾಲಾಚಾರಿಅವರು ಸ್ವತಂತ್ರ ಪಕ್ಷಕ್ಕೆ ವಂತಿಗೆಯಾಗಿ ಈ ಸಂಸ್ಥೆಯಿಂದ 50 ಸಾವಿರ ರೂ.ಗಳನ್ನು ಪಡೆದಿದ್ದಾರೆ. ಒರಿಸ್ಸಾದ ಮಾಜಿ ಮುಖ್ಯ ಮಂತ್ರಿ ಆರ್.ಎನ್. ಸಿಂಗ್‌ದೇವ್ ಅವರು ಎರಡು ಲಕ್ಷ ರೂ.ಗಳನ್ನು ಪಡೆದಿದ್ದಾರೆಂದೂ ಕಂಪನಿ ವ್ಯವಹಾರಗಳ ಶಾಖೆ ಸಚಿವ ರಘುನಾಥ ರೆಡ್ಡಿಯವರು ಇಂದು ಲೋಕಸಭೆಯಲ್ಲಿ ನುಗ್ಗೇನಹಳ್ಳಿ ಶಿವಪ್ಪನವರಿಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಜನಸಂಘವು ನಾನಾದೇಶಮುಖ್ ಅವರ ಮುಖಾಂತರ 1,25,000 ರೂ.ಗಳನ್ನು ಹಾಗೂ ಜಗದೀಶ ಪ್ರಸಾದ್ ಮಾಥೂರ್ ಮೂಲಕ 1,25,000 ರೂ.ಗಳನ್ನು ಈ ಸಂಸ್ಥೆಯಿಂದ ಪಡೆದಿದೆ. ಬಲರಾಜ ಮಧೋಕ್, ಬಕ್ಷಿ ಗುಲಾಂ ಮಹಮದ್, ಎಚ್‌.ಕೆ. ಶಾಸ್ತ್ರಿ, ಸಾವಿತ್ರಿ ನಿಗಂ ಮೊದಲಾದ ರಾಜಕಾರಣಿಗಳು ಈ ಸಂಸ್ಥೆಯಿಂದ ಹಣ ಸ್ವೀಕರಿಸಿದ್ದಾರೆಂದು ಅವರು ಉತ್ತರದಲ್ಲಿ ತಿಳಿಸಿದ್ದಾರೆ.

‘ಬಾಂಗ್ಲಾ ದೇಶದ ಸಮಸ್ಯೆಗೆ ಭಾರತದಿಂದ ತನ್ನದೇ ಆದ ಕ್ರಮ’

ನವದೆಹಲಿ, ಜೂನ್ 25– ಬಾಂಗ್ಲಾ ದೇಶದ ಸಮಸ್ಯೆಗೆ ಶೀಘ್ರವಾಗಿ ತೃಪ್ತಿಕರ ರಾಜಕೀಯ ಪರಿಹಾರ ಹುಡುಕದಿದ್ದರೆ ‘ತಾನಾಗಿಯೇ’ ಭಾರತ ಕ್ರಮ ಕೈಗೊಳ್ಳುವುದು ಅನಿವಾರ್ಯ ವಾಗಬಹುದೆಂದು ವಿದೇಶಾಂಗ ಸಚಿವ ಸ್ವರಣ್ ಸಿಂಗ್‌ರವರು ಇಂದು ಸಂಸತ್ತಿನ ಕಾಂಗ್ರೆಸ್ ಪಕ್ಷಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.