ADVERTISEMENT

ಶುಕ್ರವಾರ, 14–3–1969

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 18:47 IST
Last Updated 13 ಮಾರ್ಚ್ 2019, 18:47 IST

ನೇರ ಚುನಾವಣೆಗೆ ಚಕ್ರಗೋಷ್ಠಿ ಅಸ್ತು
ರಾವಲ್ಪಿಂಡಿ, ಮಾ. 13– ವಯಸ್ಕ ಮತದಾನದ ಆಧಾರದ ಮೇಲೆ ನೇರ ಚುನಾವಣೆಗಳು ಮತ್ತು ರಾಷ್ಟ್ರದಲ್ಲಿ ಪಾರ್ಲಿಮೆಂಟರಿ ಸರ್ಕಾರ ರಚಿಸಲು ವಿರೋಧ ಪಕ್ಷಗಳ ಜತೆ ನಡೆಸಿದ ದುಂಡು ಮೇಜಿನ ಸಮ್ಮೇಳನದಲ್ಲಿ ಒಪ್ಪಿರುವುದಾಗಿ ಪಾಕಿಸ್ತಾನದ ಅಧ್ಯಕ್ಷ ಅಯೂಬ್‌ಖಾನ್ ಇಂದು ಅಧಿಕೃತವಾಗಿ ಪ್ರಕಟಿಸಿದರು.

ಈ ಒಪ್ಪಂದದಂತೆ ರಕ್ತರಹಿತ ಕ್ರಾಂತಿ ನಂತರ ಹತ್ತು ವರ್ಷಗಳ ಹಿಂದೆ ಮೂಲೆ ಸೇರಿದ ಪಾರ್ಲಿಮೆಂಟರಿ ರೀತಿಯ ಸರ್ಕಾರವು ಮತ್ತೆ ಅಸ್ತಿತ್ವಕ್ಕೆ ಬರುವುದೆಂದು ಅಧ್ಯಕ್ಷರು ವಾಗ್ದಾನ ಮಾಡಿದರು.

ಮುರಾರಜಿ ಸಮಾಧಾನಕ್ಕಾಗಿ ಅಶಿಸ್ತು ಕುರಿತ ಹಳೇ ನಿರ್ಣಯಕ್ಕೆ ಸಣ್ಣ ತಿದ್ದುಪಡಿ
ನವದೆಹಲಿ, ಮಾ. 13– ದಿನೇ ದಿನೇ ಬೆಳೆಯುತ್ತ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿರುವ ಅಶಿಸ್ತಿನ ಸಮಸ್ಯೆ ಕುರಿತು ಬುಧವಾರ ರಾತ್ರಿ ಮತ್ತು ಇಂದು ಬೆಳಿಗ್ಗೆ ಮೂರು ಗಂಟೆಗೂ ಹೆಚ್ಚು ಕಾಲ ಚರ್ಚಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಆ ಬಗೆಗೆ 1951ರ ನಿರ್ಣಯಕ್ಕಿಂತ ಹೆಚ್ಚೇನನ್ನೂ ಸಾಧಿಸಲಾಗಲಿಲ್ಲ.

ADVERTISEMENT

ಶ್ರೀ ಮುರಾರಜಿ ದೇಸಾಯಿ ಮತ್ತು ಅವರ ಬೆಂಬಲಿಗರ ಸಮಾಧಾನಕ್ಕಾಗಿ ಹಳೆಯ ನಿರ್ಣಯಕ್ಕೆ ಕೆಲವು ಪದಗಳನ್ನು ಮಾತ್ರ ಸೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.